alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವನ ಶರೀರದಲ್ಲಿ ಪತ್ತೆಯಾಗಿದೆ ಹೊಸ ಅಂಗ

new-organ

ನಿಮ್ಮ ಶರೀರದಲ್ಲಿರುವ ಎಲ್ಲಾ ಅಂಗಾಂಗಳ ಬಗ್ಗೆ ನಿಮಗೆ ತಿಳಿದಿದ್ಯಾ?  ಹೌದು ಎಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ನಮಗ್ಯಾರಿಗೂ ಗೊತ್ತಿಲ್ಲದ ನಮ್ಮ ದೇಹದಲ್ಲಿರುವ ಅಂಗವೊಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ.

ಈ ಅಂಗಾಂಗ ಇರೋದು ನಮ್ಮ ಹೊಟ್ಟೆಯಲ್ಲಿ. ಹೊಸ ಅಂಗವೊಂದು ಪತ್ತೆಯಾಗಿರೋದು ವಿಜ್ಞಾನಿಗಳ ಪಾಲಿಗೂ ಅಚ್ಚರಿಯ ಸಂಗತಿ. ಅದ್ರಲ್ಲೂ ಆ ಅಂಗ ಹೊಟ್ಟೆಯಲ್ಲಿದ್ರೂ ಇಷ್ಟು ದಿನ ಯಾಕೆ ಯಾರ ಗಮನಕ್ಕೂ ಬಂದಿರಲಿಲ್ಲ ಅನ್ನೋದೇ ಸೋಜಿಗ ಹುಟ್ಟಿಸಿದೆ.

ಈ ಅಂಗ ಯಾವ ರೀತಿಯಾಗಿದೆ, ಯಾವ ಆಕಾರದಲ್ಲಿದೆ ಅನ್ನೋದನ್ನು ಕೂಡ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಆದ್ರೆ ಈ ಅಂಗಕ್ಕೆ ನಮ್ಮ ಶರೀರದಲ್ಲಿ ಏನು ಕೆಲಸ ಅನ್ನೋದು  ಮಾತ್ರ ಸ್ಪಷ್ಟವಾಗಿಲ್ಲ, ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಹೊಸ ಅಂಗ ಬಹುಷಃ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಅಂತಾ ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸದ್ಯ ಹೊಟ್ಟೆಯಲ್ಲಿ ಪತ್ತೆಯಾಗಿರುವ ಹೊಸ ಅಂಗಕ್ಕೆ Mesentery ಅಂತಾ ಹೆಸರಿಡಲಾಗಿದೆ. ಐರ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಈ ಹೊಸ ಅಂಗವನ್ನು ಸಂಶೋಧಿಸಲಾಗಿದ್ದು, ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...