alex Certify
ಕನ್ನಡ ದುನಿಯಾ       Mobile App
       

Kannada Duniya

ನಿರಾಶ್ರಿತೆ ಮತ್ತು ಪೊಲೀಸ್ ಅಧಿಕಾರಿಯ ವಿಭಿನ್ನ ಪ್ರೇಮ್ ಕಹಾನಿ

love-story

ಇದೊಂದು ವಿಭಿನ್ನ ಪ್ರೇಮ್ ಕಹಾನಿ. ಆಕೆ ಇರಾಕ್ ನಿಂದ ಬಂದ ಮುಸಲ್ಮಾನ್ ಧರ್ಮಕ್ಕೆ ಸೇರಿದ ನಿರಾಶ್ರಿತ ಯುವತಿ. ಆತ ಕ್ರಿಶ್ಚಿಯನ್, ಮೆಸಿಡೋನಿಯಾದ ಗಡಿಯಲ್ಲಿರುವ ಪೊಲೀಸ್ ಅಧಿಕಾರಿ. ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಅಂಕುರಿಸಿದೆ.

ಕಳೆದ ಮಾರ್ಚ್ ನಲ್ಲಿ 20 ವರ್ಷದ ಯುವತಿ ನೂರಾ ಅರ್ಕವಜಿ, ಆಕೆಯ ಹೆತ್ತವರು, ಸೋದರ ಮತ್ತು ಸೋದರಿ ಸರ್ಬಿಯಾದ ಗಡಿ ತಲುಪಿದ್ದರು. ಇರಾಕ್ ಸೇನೆ ಹಾಗೂ ಐಸಿಸ್ ನಡುವೆ ನಡೆಯುತ್ತಿದ್ದ ಘೋರ ಸಂಘರ್ಷದಿಂದ ಪಾರಾಗಿ ಯುರೋಪ್ ಅನ್ನು ಸೇರಿಕೊಳ್ಳುವ ನಿಟ್ಟಿನಲ್ಲಿ ತಿಂಗಳ ಹಿಂದೆಯೇ ದೇಶ ತೊರೆದಿದ್ದರು.

ಅಂದು ಸರ್ಬಿಯಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳಲ್ಲಿ ಇಂಗ್ಲಿಷ್ ಬಲ್ಲವರು ಬೊಬಿ ದೊಡೆವಸ್ಕಿ ಮಾತ್ರ. ನೂರಾ ಹಾಗೂ ಬೊಬಿ ನಡುವೆ ನಡೆದ ಮೊದಲ ಸಂಭಾಷಣೆಯಲ್ಲೇ ಇಬ್ಬರಿಗೂ ಪರಸ್ಪರರ ಮೇಲೆ ಪ್ರೀತಿ ಹುಟ್ಟಿತ್ತು. ಕಳೆದ ಜುಲೈನಲ್ಲಿ ಇಬ್ಬರೂ ಮದುವೆಯಾಗಿದ್ದು, ಮೆಸಿಡೋನಿಯಾದಲ್ಲಿ ನೆಲೆಸಿದ್ದಾರೆ. ನೂರಾ ಸದ್ಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕೆಲಸ ಮಾಡ್ತಾಳೆ.

ಬೊಬಿ ಆರಂಭದಲ್ಲಿ ಒಬ್ಬ ವೃತ್ತಿಪರ ನೃತ್ಯಪಟುವಾಗಿದ್ದರು. ಆದ್ರೆ ಕಳೆದ 15 ವರ್ಷದಿಂದ ಗಡಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದಿದ್ದರಿಂದ ನಿರಾಶ್ರಿತರ ಅಳಲನ್ನು ಕೂಡ ಅವರು ಅರ್ಥ ಮಾಡಿಕೊಳ್ಳುತ್ತಿದ್ದರು, ಇದೀಗ ಇಂಗ್ಲಿಷ್ ಭಾಷೆ ಅವರಿಗೆ ಬಾಳ ಸಂಗಾತಿಯನ್ನು ಹುಡುಕಿಕೊಟ್ಟಿದೆ. ಜಾತಿ, ಧರ್ಮ, ಅಂತಸ್ತು ಯಾವುದೂ ಅವರ ಪ್ರೀತಿಗೆ ಅಡ್ಡಿಯಾಗಿಲ್ಲ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...