alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷದಿಂದ ಈತ ಉಡುತ್ತಿದ್ದಾನೆ ಸೀರೆ..!

sareeman_30_06_2016

ಸೀರೆ ಭಾರತೀಯ ನಾರಿಯರಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಯಾವುದೇ ಸಭೆ, ಸಮಾರಂಭ, ಹಬ್ಬಗಳಲ್ಲಿ ಸೀರೆಗೇ ಹೆಚ್ಚಿನ ಮಹತ್ವ ಕೊಡುತ್ತಾರೆ. ಇದು ನಮ್ಮ ದೇಶದ ಸಂಸ್ಕೃತಿಯೂ ಹೌದು.

ಹೆಂಗಸರು ಸೀರೆ ಉಟ್ಟರೆ ಅವಳನ್ನು ಗೌರವ ಭಾವದಿಂದ ನೋಡುತ್ತಾರೆ. ಅದೇ ಒಬ್ಬ ಗಂಡಸು ಸೀರೆ ಉಟ್ಟರೆ, ಎಲ್ಲರು ಅವನನ್ನು ನೋಡುವ ರೀತಿಯೇ ಬೇರೆ. ಇದ್ಯಾವುದನ್ನೂ ಲೆಕ್ಕಿಸದೇ ಕಳೆದ 12 ವರ್ಷದಿಂದ ಸೀರೆ ಉಡುತ್ತಿದ್ದಾನೆ ಹಿಮಾಂಶು ವರ್ಮಾ.

ಹಿಮಾಂಶು ವರ್ಮಾ ದೆಹಲಿಯ ಡಿಸೈನರ್. ಇವರಿಗೆ ಹೀಗೆ ಸೀರೆ ಉಡುವುದು ತುಂಬ ಇಷ್ಟವಂತೆ. “ನಾನು ಇದನ್ನು ಮಹಿಳೆಯರ ಉಡುಪು ಎಂದು ಪರಿಗಣಿಸಿಲ್ಲ. ಬದಲಾಗಿ ಇದನ್ನು 150 ವರ್ಷದ ಹಿಂದಿನ ಸಂಸ್ಕೃತಿಯೆಂದು ತಿಳಿದಿದ್ದೇನೆ. ಅಷ್ಟೇ ಅಲ್ಲದೆ ಹಿಂದಿನ ಕಾಲದಲ್ಲಿ ಹಲವು ತರದ ಸೀರೆಗಳಿರುತ್ತಿದ್ದವು. ಅವುಗಳ ಪೈಕಿ ಧೋತಿಯೂ ಒಂದು. ಇದನ್ನು ಗಂಡಸರು ಕೂಡ ಉಡುತ್ತಿದ್ದರು” ಎಂದು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾರೆ ಹಿಮಾಂಶು.

ಮೊದಮೊದಲು ಹಿಮಾಂಶು ಬಣ್ಣ ಬಣ್ಣದ ಸೀರೆ ಉಡುತ್ತಿದ್ದು, ಆದರೆ ವಯಸ್ಸಾದಂತೆ ಈಗ ಕೈಮಗ್ಗದ ಸೀರೆ ಉಡುತ್ತಿದ್ದಾರೆ. ಹಿಮಾಂಶು ಸೀರೆಯನ್ನು ಹಲವಾರು ವಿಧದಲ್ಲಿ ಧರಿಸುತ್ತಾರೆ. 2014 ರಿಂದ ಇವರು ಬೇರೆ ಬೇರೆ ನಗರಗಳಲ್ಲಿ ‘ಸ್ಯಾರಿ ಫೆಸ್ಟಿವಲ್’ ಅನ್ನು ಕೂಡ ಆಯೋಜಿಸಿದ್ದಾರೆ. ಜನ ಇವರನ್ನು ‘ಸ್ಯಾರಿ ಮೆನ್’ ಎಂದೇ ಕರೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...