alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ ! 71 ವರ್ಷಗಳ ಬಳಿಕ ಸಿಕ್ಲು ಗೆಳತಿ

war_1455192752

ನಂಬಲಸಾಧ್ಯವಾದ ಘಟನೆಯೊಂದು ನಡೆದಿದೆ. ಪರಸ್ಪರ ಪ್ರೀತಿಸಿ ವಿವಾಹವಾಗ ಬಯಸಿದ್ದ ಜೋಡಿಯೊಂದು ಕಾರಣಾಂತರಗಳಿಂದ ಬೇರ್ಪಟ್ಟಿದ್ದು, ಬರೋಬ್ಬರಿ 71 ವರ್ಷಗಳ ಬಳಿಕ ಈಗ ಮತ್ತೇ ಒಂದಾಗಿದ್ದಾರೆ.

ಅಮೆರಿಕಾದ ನಾರ್ವುಡ್ ಥಾಮಸ್ ಗೆ ಈಗ 93 ವರ್ಷ. ಅವರು ಪ್ರೀತಿಸುತ್ತಿದ್ದ ಜೋಯ್ಸ್ ಮೊರಿಸ್ ವಯಸ್ಸು 88. 71 ವರ್ಷಗಳಿಂದ ಬೇರೆಯಾಗಿದ್ದ ಇವರುಗಳು ಪ್ರೇಮಿಗಳ ದಿನ ಸಮೀಪಿಸುತ್ತಿರುವ ಸಂದರ್ಭದಲ್ಲೇ ಒಂದಾಗಿರುವುದು ಕಾಕತಾಳೀಯ.

ಅಮೆರಿಕಾ ಸೇನೆಯಲ್ಲಿ ಯೋಧರಾಗಿದ್ದ ನಾರ್ವುಡ್ ಥಾಮಸ್, ಜೋಯ್ಸ್ ರನ್ನು ವಿವಾಹವಾಗಲು ಸಿದ್ದತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ದ್ವಿತೀಯ ಮಹಾ ಯುದ್ದ ಆರಂಭಗೊಂಡ ಕಾರಣ ನಾರ್ವುಡ್ ಥಾಮಸ್ ಹೋಗಲೇಬೇಕಾಯಿತು.

mor_1455192921

ಬಳಿಕ ನಾರ್ವುಡ್ ಹಾಗೂ ಜೋಯ್ಸ್ ನಡುವೆ ನಡೆದ ಪತ್ರ ವ್ಯವಹಾರದ ವೇಳೆ ಗೊಂದಲ ಮಾಡಿಕೊಂಡ ಜೋಯ್ಸ್, ಮತ್ತೊಬ್ಬರೊಂದಿಗೆ ವಿವಾಹ ಮಾಡಿಕೊಂಡು ಆಸ್ಟ್ರೇಲಿಯಾದಲ್ಲಿ ನೆಲೆಸಿದರು. ಯುದ್ದ ಮುಗಿದ ಬಳಿಕ ನಾರ್ವುಡ್ ಥಾಮಸ್ ಕೂಡಾ ವಿವಾಹವಾದರು.

10 ವರ್ಷಗಳ ಹಿಂದೆ ನಾರ್ವುಡ್ ಥಾಮಸ್ ಪತ್ನಿ ತೀರಿಕೊಂಡಿದ್ದು, ಅತ್ತ ಜೋಯ್ಸ್ ತನ್ನ ಪತಿಯಿಂದ ದೂರಾಗಿದ್ದರು. ಮಗನ ಬಳಿ ತಮ್ಮ 71 ವರ್ಷದ ಹಿಂದಿನ ಪ್ರೀತಿಯ ಕುರಿತು ನಾರ್ವುಡ್ ಥಾಮಸ್ ಹೇಳಿಕೊಂಡಿದ್ದು, ಸಾಮಾಜಿಕ ಜಾಲ ತಾಣದ ಮೂಲಕ ಜೋಯ್ಸ್ ಸಿಕ್ಕಿದ್ದಾರೆ. ಆಸ್ಟ್ರೇಲಿಯಾದಲ್ಲಿದ್ದ ಆಕೆಯನ್ನು ಈಗ ಭೇಟಿ ಮಾಡಿರುವ ನಾರ್ವುಡ್ ಥಾಮಸ್ ‘ಪ್ರೇಮಿಗಳ ದಿನ’ ವನ್ನು ವಿಶೇಷವಾಗಿ ಆಚರಿಸುತ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...