alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ದಿನದ ಸೆಕ್ಸ್ ನಿಂದ ಏನೆಲ್ಲ ಲಾಭ ಗೊತ್ತಾ…?

ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಅತ್ಯಗತ್ಯ. ಸೆಕ್ಸ್ ಆನಂದ ಹೆಚ್ಚಿಸುವ ಕೆಲಸ ಮಾತ್ರ ಮಾಡುವುದಿಲ್ಲ. ಸಂಭೋಗದಿಂದ ಸಾಕಷ್ಟು ಲಾಭಗಳಿವೆ. ಪ್ರತಿ ನಿತ್ಯದ ಸೆಕ್ಸ್ ಅನೇಕ ಆರೋಗ್ಯ ಸಮಸ್ಯೆ ದೂರ ಮಾಡುವ ಶಕ್ತಿ ಹೊಂದಿದೆ.

ಇತ್ತೀಚಿಗೆ ನಡೆದ ಸಂಶೋಧನೆಯೊಂದು ಸೆಕ್ಸ್, ಹೃದಯಾಘಾತವನ್ನು ಕಡಿಮೆ ಮಾಡುತ್ತದೆ ಎಂದಿದೆ. ಸೆಕ್ಸ್ ನಲ್ಲಿ ಸಕ್ರಿಯವಾಗಿರುವ ಪುರುಷರಿಗೆ ಹೃದಯಾಘಾತವಾಗುವ ಪ್ರಮಾಣ ಕಡಿಮೆಯಂತೆ. ವಾರದಲ್ಲಿ ಎರಡು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯ ತಿಂಗಳಲ್ಲಿ ಒಂದು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯಕ್ಕಿಂತ ಹೆಚ್ಚು ಆರೋಗ್ಯಕರವಾಗಿರುತ್ತದೆಯಂತೆ.

ನಿಯಮಿತ ಸೆಕ್ಸ್ ನಿಂದ ಪ್ರತಿರಕ್ಷಣಾ ವ್ಯವಸ್ಥೆ ಪ್ರಬಲವಾಗುತ್ತದೆ. ಇದ್ರಿಂದ ನಿಮ್ಮ ದೇಹ ಸಾಮಾನ್ಯ ಕಾಯಿಲೆಗಳನ್ನು (ನೆಗಡಿ –ಕೆಮ್ಮು) ಸುಲಭವಾಗಿ ಹೊಡೆದೋಡಿಸುತ್ತದೆ.

ಮನೆ, ಕೆಲಸದ ಒತ್ತಡದಲ್ಲಿರುವವರಿಗೆ ಬೆಡ್ ರೂಂ ಒಳ್ಳೆಯ ಮದ್ದು. ಸೆಕ್ಸ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬೆಡ್ ರೂಮ್ ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸುತ್ತಾರಂತೆ.

ತಲೆನೋವಿನ ನೆಪ ಹೇಳಿ ಸೆಕ್ಸ್ ನಿಂದ ದೂರವಿರುವವರಿಗೊಂದು ಕಿವಿ ಮಾತು. ಸೆಕ್ಸ್ ನಲ್ಲಿ ಪರಾಕಾಷ್ಠೆ ತಲುಪಿದಾಗ ತಲೆನೋವಿನ ಜೊತೆ ಅನೇಕ ನೋವುಗಳು ಕಡಿಮೆಯಾಗುತ್ತವೆ.

ಸೆಕ್ಸ್ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಪ್ರತಿಯೊಂದು ಅಂಗದಲ್ಲೂ ರಕ್ತ ಸಂಚಾರ ಸುಗಮವಾಗಲು ಸೆಕ್ಸ್ ಕಾರಣವಾಗುತ್ತದೆ.

ಸಂಭೋಗದ ನಂತ್ರ ಒತ್ತಡ ಕಡಿಮೆಯಾಗಿ ಮನಸ್ಸು ರಿಲ್ಯಾಕ್ಸ್ ಆಗುವುದ್ರಿಂದ ಸುಖ ನಿದ್ರೆ ಆವರಿಸುತ್ತದೆ. ಜೊತೆಗೆ ಫಿಟ್ನೆಸ್ ನಲ್ಲಿ ಸುಧಾರಣೆ ಕಾಣಬಹುದಾಗಿದೆ. ಅರ್ಧ ಗಂಟೆಯ ಪ್ರೀತಿ 80ಕ್ಕಿಂತ ಹೆಚ್ಚು ಕ್ಯಾಲೋರಿ ಬರ್ನ್ ಮಾಡುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...