alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಎಸ್ ಪೇಟಿಂಗ್ ನಲ್ಲಿ 87 ರ ಅಜ್ಜಿ ಬಿಡಿಸಿದ್ಲು ಅದ್ಭುತ ಚಿತ್ರ

ಮನೆಯಲ್ಲಿ ಗಿಡಗಳನ್ನು ಬೆಳೆಸ್ತಾ, ಇಲ್ಲ ಮೊಮ್ಮಕ್ಕಳ ಜೊತೆ ಆಟವಾಡ್ತಾ, ಇಲ್ಲ ಪಾರ್ಕ್ ನಲ್ಲಿ ಕುಳಿತು ಮಾತನಾಡ್ತಾ ಇರುವ ಅಜ್ಜ-ಅಜ್ಜಿಯರನ್ನು ನಾವು ಹೆಚ್ಚಾಗಿ ನೋಡ್ತೇವೆ. ಆದ್ರೆ ಲಂಡನ್ ನ ಈ ಅಜ್ಜಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. 87 ವರ್ಷದ ಕ್ವಾಚಾ ಗಾರ್ಸಿಯಾ ಝೈರಾ ಮೈಕ್ರೋಸಾಫ್ಟ್ ಪೇಂಟ್ ಬಳಸಿ ಬಿಡಿಸಿದ ಚಿತ್ರ ಎಲ್ಲರನ್ನು ಆಶ್ಚರ್ಯಗೊಳಿಸುತ್ತಿದೆ.

ಕ್ವಾಚಾ ಪತಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವ್ರನ್ನು ನೋಡಿಕೊಳ್ಳುತ್ತಿದ್ದ ಕ್ವಾಚಾ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗ್ತಿರಲಿಲ್ಲ. ಸಮಯ ಕಳೆಯಲು ಕ್ವಾಚಾಗೆ ಮಕ್ಕಳು ಕಂಪ್ಯೂಟರ್ ಒಂದನ್ನು ನೀಡಿದ್ದರು. ಆರಂಭದಲ್ಲಿ ಎಂಎಸ್ ಪೇಂಟ್ ನಲ್ಲಿ ಸಣ್ಣ ಮನೆ, ಮರಗಳನ್ನು ಬಿಡಿಸುತ್ತಿದ್ದರು. ಇದೊಂದು ಹವ್ಯಾಸವಾಯ್ತು. ಸುಂದರ ಚಿತ್ರಗಳನ್ನು ಕ್ವಾಚಾ ಬಿಡಿಸಲು ಶುರುಮಾಡಿದ್ರು.

ಕ್ವಾಚಾ ಚಿತ್ರ ನೋಡಿದ್ರೆ ಇದು ಎಂಎಸ್ ಪೇಂಟ್ ನಿಂದ ಮಾಡಿದ್ದು ಎನ್ನಲು ಸಾಧ್ಯವೇಯಿಲ್ಲ. ಕ್ವಾಚಾ ಚಿತ್ರಗಳನ್ನು ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದರು. ಮೊಮ್ಮಕ್ಕಳ ಸಲಹೆ ಮೇರೆಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 9ರವರೆಗೆ ಕ್ವಾಚಾಗೆ 300 ಫಾಲೋವರ್ಸ್ ಇದ್ದರು. ಆದ್ರೆ ಈ ಚಿತ್ರಗಳನ್ನು ಪೋಸ್ಟ್ ಮಾಡಿದ ಮೇಲೆ ಕ್ವಾಚಾರನ್ನು 1,08,000 ಮಂದಿ ಫಾಲೋ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...