alex Certify
ಕನ್ನಡ ದುನಿಯಾ       Mobile App
       

Kannada Duniya

ಕಲಬೆರಕೆ ರಸಗುಲ್ಲ ತಿಂದೀರಾ ಜೋಕೆ..!

rasgullasಗಾಜಿಯಾಬಾದ್ ನಲ್ಲಿ ಬರೋಬ್ಬರಿ 6000 ಕೆಜಿ ಕಲಬೆರಕೆ ರಸಗುಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಕಲಬೆರಕೆ ಹಾಲು ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಬಂಗಾಳಿ ರಸಗುಲ್ಲ ಇದು. ದೆಹಲಿ-ಉತ್ತರಪ್ರದೇಶ ಗಡಿಯಲ್ಲಿರುವ ಕೊಳಚೆ ಪ್ರದೇಶದಲ್ಲಿ ಈ ದಂಧೆ ನಡೆಯುತ್ತಿತ್ತು.

6 ಕಾರ್ಯಾಗಾರಗಳಲ್ಲಿ ಕಲಬೆರಕೆ ರಸಗುಲ್ಲ ತಯಾರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರೀತಿ ಜೈಸ್ವಾಲ್, ಹರ್ಷವಿಹಾರ್ ಕಾಲೋನಿಯಲ್ಲಿ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ವಶಪಡಿಸಿಕೊಂಡ ರಸಗುಲ್ಲವನ್ನು ನಾಶಮಾಡಲಾಗಿದೆ. ಇವನ್ನು ಕೃತಕ ಹಾಲಿನಿಂದ ತಯಾರಿಸಲಾಗುತ್ತಿತ್ತು. ಇದರ ಜೊತೆಗೆ ನಿಷೇಧಿತ ಅಪಾಯಕಾರಿ ರಾಸಾಯನಿಕಗಳನ್ನೂ ಬಳಸಲಾಗಿತ್ತು. ಸ್ವಚ್ಛತೆಯಿಲ್ಲದ ಕೊಳಕು ಪ್ರದೇಶದಲ್ಲಿ ರಸಗುಲ್ಲ ದಂಧೆ ಬಿಂದಾಸ್ ಆಗಿ ನಡೆಯುತ್ತಿತ್ತು. ಕೆಲ ಅಂಗಡಿಗಳಲ್ಲಿದ್ದ ಮಾಲೀಕರು ಮತ್ತು ಸಿಬ್ಬಂದಿ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾರೆ. ಕಲಬೆರಕೆ ರಸಗುಲ್ಲದ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...