alex Certify ವಯಸ್ಸು 30 ರ ನಂತ್ರ ಇರಲಿ ಈ ವಿಷಯದ ಬಗ್ಗೆ ಗಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸು 30 ರ ನಂತ್ರ ಇರಲಿ ಈ ವಿಷಯದ ಬಗ್ಗೆ ಗಮನ

30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ.

30 ವರ್ಷದ ನಂತ್ರ ಚಯಾಪಚಯ ಕ್ರಿಯೆಯಲ್ಲಿ ಬದಲಾವಣೆಯಾಗುತ್ತದೆ. ಮುಖ ಹೊಳಪು ಕಳೆದುಕೊಳ್ಳುತ್ತದೆ. ತೂಕ ಏರಲು ಶುರುವಾಗುತ್ತದೆ. ತೂಕ ಹೆಚ್ಚಾದಂತೆ ಒತ್ತಡ ಜಾಸ್ತಿಯಾಗುತ್ತದೆ. ಒತ್ತಡ ಕಡಿಮೆ ಮಾಡಿಕೊಂಡು, ತೂಕ ಇಳಿಸಿಕೊಂಡು ಸದಾ ಲವಲವಿಕೆಯಿಂದ ಇರಲು ಬಯಸುವವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು.

ಸಾಮಾನ್ಯವಾಗಿ ನಮ್ಮನ್ನು ಬಿಟ್ಟು ಜನರು ಬೇರೆಯವರ ಬಗ್ಗೆ ಯೋಚನೆ ಮಾಡ್ತಾರೆ. ಅವರನ್ನು ಖುಷಿಯಾಗಿಡಲು ಪ್ರಯತ್ನಿಸ್ತಾರೆ. ಆದ್ರೆ 30ರ ನಂತ್ರ ಇತರರ ಚಿಂತೆ ಬಿಟ್ಟುಬಿಡಿ. ನಿಮ್ಮ ಜೀವನದ ಬಗ್ಗೆ ಹೆಚ್ಚು ಫೋಕಸ್ ಮಾಡಿ. ಕಳೆದು ಹೋದ ಸಮಯ ವಾಪಸ್ ಬರೋದಿಲ್ಲ ಎನ್ನುವುದು ನೆನಪಿರಲಿ.

ಖಂಡಿತವಾಗಿಯೂ ನಿಮಗೆ ಅಗತ್ಯವಿರುವಷ್ಟು ಹಣವನ್ನು ಖರ್ಚು ಮಾಡಿ. ಆದ್ರೆ ಉಳಿತಾಯವನ್ನು ಮರೆಯಬೇಡಿ. ಸಂಪಾದನೆಯಲ್ಲಿ ಒಂದು ಭಾಗವನ್ನು ಉಳಿತಾಯ ಮಾಡಿದ್ರೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ.

ಜನರ ಮೇಲೆ ತುಂಬಾ ನಿರೀಕ್ಷೆ ಇಟ್ಟಕೊಳ್ಳಬೇಡಿ. ಜನರನ್ನು ನಂಬಿ ಅವ್ರು ಮೋಸ ಮಾಡಿದಾಗ ಹತಾಶೆ ಹೆಚ್ಚಾಗಿ ಜೀವನದಲ್ಲಿ ಸಂತೋಷ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...