alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಸರ್ಜರಿ ನಂತ್ರ 200 ಕೆ.ಜಿ ಇಳಿಯಲಿದ್ದಾಳೆ ಇಮಾನ್

mahila_9aqc1jzವಿಶ್ವದ ಅತ್ಯಂತ ದಢೂತಿ ಮಹಿಳೆ ಕೈರೋದ ಇಮಾನ್ ಅಹ್ಮದ್ ಶಸ್ತ್ರಚಿಕಿತ್ಸೆ ಬಳಿಕ ಕೇವಲ 200 ಕೆ.ಜಿ. ಮಾತ್ರ ಇಳಿಯಲಿದ್ದಾಳೆ. ಮೂರು ವರ್ಷದ ನಂತ್ರ 100 ಕೆ.ಜಿ ತೂಕವನ್ನು ಮತ್ತೆ ಕಡಿಮೆ ಮಾಡಲಾಗುವುದು.

36 ವರ್ಷದ ಇಮಾನ್ 500 ಕೆ.ಜಿ ತೂಕ ಹೊಂದಿದ್ದಾಳೆ. ಶನಿವಾರ ಆಕೆಯನ್ನು ಮುಂಬೈಗೆ ಸರಕು ವಿಮಾನದಲ್ಲಿ ಕರೆತರಲಾಗಿದೆ. ಇದಕ್ಕೆ 80 ಲಕ್ಷ ರೂಪಾಯಿ ಖರ್ಚಾಗಿದೆ. ಆದ್ರೆ ಭಾರತದ ವೈದ್ಯರು ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇದೊಂದು ಅನನ್ಯ ಹಾಗೂ ಅಪಾಯಕಾರಿ ಚಿಕಿತ್ಸೆಯಾಗಿರುವುದರಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗ್ತಾ ಇದೆ. ಶಸ್ತ್ರಚಿಕಿತ್ಸೆ ನಂತ್ರ ಸಾಮಾನ್ಯರಂತೆ ಜೀವನ ನಡೆಸಲು 3-4 ವರ್ಷ ಬೇಕೆಂದು ಸೈಫೀ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಮೊದಲ ಶಸ್ತ್ರಚಿಕಿತ್ಸೆ ನಂತ್ರ 200 ಕೆಜಿ ತೂಕ ಇಳಿಯಲಿದೆ. ಇಮಾನ್ ತನ್ನ ಕೆಲಸವನ್ನು ಮಾಡಿಕೊಳ್ಳುವಷ್ಟಾಗ್ತಾಳೆ. ಆಕೆ ತವರಿಗೆ ಮರಳಬಹುದಾಗಿದೆ.ಮೂರು ವರ್ಷಗಳ ಬಳಿಕ 100 ಕೆಜಿ ಇಳಿಸಲು ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ. ಹುಟ್ಟುವಾಗಲೇ 5 ಕೆಜಿ ಇದ್ದ ಇಮಾನ್ 25 ವರ್ಷಗಳಿಂದ ಹಾಸಿಗೆಯಿಂದ ಕೆಳಗಿಳಿದಿರಲಿಲ್ಲ. ಶಾಲೆಗೆ ಕೂಡ ಆಕೆ ಹೋಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...