alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮೀಯರಾದ್ರೂ ಒಬ್ಬರ ಮುಖ ಒಬ್ಬರು ನೋಡಿಲ್ಲ ಯಾಕೆ ಗೊತ್ತಾ…?

ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಟ್ವಿಟರ್ಗಳಂತಹ ಸೋಶಿಯಲ್ ಮೀಡಿಯಾಗಳಲ್ಲೇ ಪ್ರೀತಿ ಹುಟ್ಟೋದು ಕಾಮನ್. ಸೋಶಿಯಲ್ ಮೀಡಿಯಾದಿಂದ ಶುರುವಾದ ಪ್ರೀತಿ, ಡೇಟಿಂಗ್, ಪಬ್ ಸಿನೆಮಾ ಅಂತಾ ಹೇಳಿ ಕೊನೆಗೊಂದು ದಿನ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ಅಂತ್ಯವಾಗುತ್ತೆ.

ಆದ್ರೆ ಇಲ್ಲೊಂದು ವಿಶೇಷ ಜೋಡಿ ಇದೆ. ಈ ಜೋಡಿ ಕಳೆದ ಎರಡು ವರ್ಷಗಳಿಂದ ಪರಿಚಿತವಾಗಿದೆ. ಆದ್ರೆಇವರುಗಳು ಇದೂವರೆಗೂ ಮುಖತಃ ಭೇಟಿಯಾಗಿಲ್ಲ….ಇದೂವರೆಗೂ ಈ ಜೋಡಿ ಇ ಮೇಲ್ ನಲ್ಲೇ ಚಾಟಿಂಗ್ ಮಾಡ್ತಿದೆ. ಆದ್ರೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿಲ್ಲ, ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ.

ಆಶ್ಚರ್ಯ ಆಯ್ತಾ….ಹೌದು, ಕಳೆದ ಎರಡು ವರ್ಷಗಳಿಂದಲೂ ಈ ಜೋಡಿ ಸುಮಾರು 500 ಕ್ಕೂ ಹೆಚ್ಚು ಇ ಮೇಲ್ ಒಬ್ಬರಿಗೊಬ್ಬರು ಕಳಿಸಿಕೊಂಡಿದ್ದಾರೆ. ಇವರು ಕಳಿಸಿಕೊಂಡಿರುವ ಇ ಮೇಲ್ ನಲ್ಲಿ ಯಾವ ಪ್ರೇಮ ನಿವೇದನೆಯೂ ಇಲ್ಲ, ಈ ಮೇಲ್ ಗಳಲ್ಲಿರುವುದು ಬರಿ ಸಾಹಿತ್ಯ, ಕವಿಗಳು, ಪುಸ್ತಕಗಳು, ಕವಿತೆಗಳ ಬಗ್ಗೆ ಚರ್ಚೆ, ಜೀವನೋತ್ಸಾಹದ ವಿಷಯಗಳ ಬಗ್ಗೆ ಚರ್ಚೆಗಳೇ ಇವರ ಮಧ್ಯೆ ನಡೆಯುತ್ತಿದ್ದವು.

ಅಷ್ಟಕ್ಕೂ ಇವರ ಗೆಳೆತನ ಹೇಗೆ ಶುರುವಾಯ್ತು ಅಂತೀರಾ..? ಹೇಳ್ತೀವಿ ಕೇಳಿ..ಆಕೆ ಮುಂಬೈ ಮೂಲದ ಹುಡುಗಿ ಕಾಲೇಜಿನಲ್ಲಿರುವಾಗಲೇ ಆಕೆಗೆ ಒಬ್ಬ ಹುಡುಗನ ಜೊತೆ ಪ್ರೀತಿ ಶುರುವಾಗಿತ್ತು. ಆದ್ರೆ ಅದು ಮಧ್ಯದಲ್ಲೇ ಬ್ರೇಕಪ್ ಆಯ್ತು. ಕೆಲವು ದಿನಗಳ ನಂತರ ಮತ್ತೊಬ್ಬನೊಂದಿಗೆ ಆಕೆಗೆ ಪ್ರೀತಿ ಹುಟ್ಟಿಕೊಂಡಿತು. ಆದ್ರೆ ಅವರಿಬ್ಬರ ಪ್ರೀತಿಗೆ ಪೋಷಕರ ವಿರೋಧ ಎದುರಾಯ್ತು.

ಹೀಗಾಗಿ ಆ ಹುಡುಗ ಆಕೆಯ ಪ್ರೀತಿಯನ್ನ ನಿರಾಕರಿಸಿದ. ಇದ್ರಿಂದ ಮಾನಸಿಕವಾಗಿ ಕುಗ್ಗಿ ಹೋದ ಆ ಹುಡುಗಿ, ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಳು. ಇದ್ರಿಂದಾಗಿ ವೈದ್ಯರ ಮೊರೆ ಹೋದಳು. ಹೀಗೆ ವರ್ಷ ಕಳೆಯಿತು. ಒಂದು ದಿನ ವಿಶ್ವದ ಪುಸ್ತಕ ಪ್ರೇಮಿಗಳ ಆನ್ಲೈನ್ ಚರ್ಚೆಯಲ್ಲಿ ಭಾಗವಹಿಸಿದ್ಲು.

ಅಡಾ ಎಂಬ ಅಂಕಿತ ನಾಮದಿಂದ ಪರಿಚಯಿಸಿಕೊಂಡ ಆಕೆಗೆ ಆಗ ಸಿಕ್ಕಿದ್ದು ಸು ಎಂಬ ಅಂಕಿತ ನಾಮದ ಹುಡುಗ. ಈ ಚರ್ಚೆಯಾಗಿ ವರ್ಷದ ಬಳಿಕ ಆಕೆಯ ಇನ್ ಬಾಕ್ಸ್ ಗೆ ಒಂದು ಮೇಲ್ ಬಂತು. ಆ ಮೇಲ್ ಆಕೆಯ ಮುಖದಲ್ಲಿ ಎಷ್ಟೋ ದಿನಗಳಿಂದ ಮಾಯವಾಗಿದ್ದ ನಗು ಮೂಡಿಸಿತು ಅಂತಾ ಆಕೆಯೇ ಹೇಳಿಕೊಳ್ತಾಳೆ. ಹೀಗೆ ಅಡಾ ಮತ್ತು ಸು ನಡುವೆ ಇ ಮೇಲ್ ಚಾಟಿಂಗ್ ಮುಂದುವರೆಯಿತು. ಕಳೆದ ಎರಡು ವರ್ಷಗಳಲ್ಲಿ ಅವರಿಬ್ಬರು ಒಟ್ಟು 500 ಕ್ಕೂ ಹೆಚ್ಚು ಇ ಮೇಲ್ ಕಳಿಸಿದ್ದಾರೆ.

ಮೇಲ್ ನಲ್ಲಿ ಪ್ರತಿಯೊಂದು ವಿಷಯದ ಬಗ್ಗೆಯೂ ನಾವು ಚರ್ಚಿಸಿದ್ದಾರೆ. ಇಬ್ಬರ ಆತ್ಮಗಳು ಒಂದಾಗಿವೆ. ಇಬ್ಬರ ನಡುವೆ ಪ್ರೀತಿ, ವಿಶ್ವಾಸವಿದೆ. ಹೀಗಾಗಿ ನಾವು ಭೇಟಿಯಾಗಿ ಮಾತನಾಡಬೇಕೆಂಬ ಅವಶ್ಯಕತೆ ಇಲ್ಲ. ಇದೊಂದು ವಿಭಿನ್ನ ರೀತಿಯ ಸಂತೋಷ ಅಂತಾರೆ ಅಡಾ. ಒಟ್ನಲ್ಲಿ ಅಡಾ ಮತ್ತು ಸು ಸ್ನೇಹ ನಿಜಕ್ಕೂ ಗ್ರೇಟ್….ಇಂತಹ ಸ್ನೇಹಿತರಿದ್ದಾಗ ಯಾವ ನೋವನ್ನಾದ್ರೂ ಬೇಗ ಮರೆಯಬಹುದು. ಸ್ನೇಹಕ್ಕೆ ಬೆಲೆ ಕಟ್ಟಲಾಗದ್ದು ಅಂತಾರಲ್ಲಾ ಇದಕ್ಕೆಅನ್ಸತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...