alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗರ ಪ್ರೀತಿಯನ್ನು ಅರಿಯುವುದು ಹೇಗೆ..?

Young happy couple talking together outdoor - sitting on grass

ಪ್ರೀತಿ ಅಂದ್ರೇನೇ ಹಾಗೆ, ಯಾವ ಕ್ಷಣದಲ್ಲಿ ಯಾರ ಮೇಲಾದ್ರೂ ಹುಟ್ಟಬಹುದು. ಆರಂಭದಲ್ಲಿ ಅವನು ನನ್ನನ್ನು ಪ್ರೀತಿಸ್ತಿದ್ದಾನೆ ಎನಿಸುತ್ತದೆ, ಮರುಕ್ಷಣ ಕೇವಲ ಸ್ನೇಹವಿರಬಹುದು ಅನ್ನೋ ಅನುಮಾನ ಮೂಡುತ್ತದೆ.

ಕೆಲವರು ಪ್ರೀತಿಯನ್ನು ನೇರವಾಗಿ ಹೇಳಿಕೊಳ್ತಾರೆ. ಆದ್ರೆ ನಾಚಿಕೆ ಸ್ವಭಾವದ ಪುರುಷರು ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ವ್ಯಕ್ತಪಡಿಸಬಹುದು. ನೇರವಾಗಿ ಐ ಲವ್ ಯೂ ಅಂದ್ಬಿಟ್ರೆ ನಿಮ್ಮ ರಿಯಾಕ್ಷನ್ ಏನಿರತ್ತೋ ಅನ್ನೋ ಭಯ ಅವರಿಗೆ. ಆತ ನಿಮ್ಮೆಡೆಗೆ ಆಕರ್ಷಿತನಾಗಿದ್ದಾನೆ ಅನ್ನೋದನ್ನು ದೃಢಪಡಿಸುವ 5 ಸಂಕೇತಗಳು ಯಾವುದು ಅಂತಾ ನೋಡೋಣ.

ಯಾವಾಗಲೂ ನಿಮಗೆ ಸಾಥ್ ಕೊಡ್ತಾನೆ ಅಂದ್ರೆ ಆತನು ನಿಮ್ಮೆಡೆಗೆ ಆಕರ್ಷಿತನಾಗಿದ್ದಾನೆ ಅಂತಾನೇ ಅರ್ಥ. ಕೆಲಸವನ್ನೆಲ್ಲ ಬದಿಗೊತ್ತಿ ನಿಮ್ಮ ಸಹಾಯಕ್ಕೆ ಧಾವಿಸೋದು, ಅಥವಾ ಪಾರ್ಟಿಗಳಿಗೆ ಜೊತೆಯಾಗೋದು, ಒಟ್ಟಿಗೆ ಸಿನೆಮಾ ನೋಡೋದು ಇಂಥದ್ದೆಲ್ಲಾ ಪ್ರೀತಿಯನ್ನು ಪಕ್ಕಾ ಮಾಡುತ್ತದೆ.

ಆತನ ಹಾವಭಾವವನ್ನು ನೋಡಿ ಮನಸ್ಸಿನ ಭಾವನೆಗಳನ್ನು ನೀವು ಅರಿಯಬಹುದು. ನಿಮ್ಮನ್ನು ಸ್ಪರ್ಷಿಸುವ ರೀತಿ, ನಿಮ್ಮೊಂದಿಗೆ ಮಾತನಾಡುವಾಗ ಮುಖದಲ್ಲಿ ಮೂಡುವ ಭಾವನೆ ಇವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ.

ಇನ್ನು ಕಣ್ಣು ಕಣ್ಣು ಮಾತನಾಡೋದು ಅಂತಾರಲ್ಲ ಅದು ಕೂಡ ಪ್ರೇಮದ ಸಂಕೇತ. ನಿಮ್ಮ ಜೊತೆ ಮಾತನಾಡುವಾಗ ಅವನು ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ಪ್ರೀತಿ ಇದೆ ಅಂತಾನೇ ಅರ್ಥ.

ಸಾಮಾನ್ಯವಾಗಿ ಪುರುಷರು ತಮ್ಮ ಖಾಸಗಿ ಬದುಕಿನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಯಾರೊಂದಿಗೂ ಎಲ್ಲವನ್ನೂ ಮನಬಿಚ್ಚಿ ಮಾತನಾಡುವುದಿಲ್ಲ. ಆದ್ರೆ ನಿಮ್ಮೊಂದಿಗೆ ಎಲ್ಲವನ್ನೂ ಶೇರ್ ಮಾಡಿಕೊಳ್ತಾರೆ ಅಂದ್ರೆ ನಿಮ್ಮ ಮೇಲೆ ಆಕರ್ಷಿತರಾಗಿದ್ದಾರೆ ಎಂದುಕೊಳ್ಳಬಹುದು. ಕಳೆದು ಹೋದ ಸಂಗತಿಗಳು, ಭವಿಷ್ಯದ ಕನಸು, ಆಸಕ್ತಿ, ಹವ್ಯಾಸ, ಕುಟುಂಬ, ಸ್ನೇಹಿತರು ಹೀಗೆ ಎಲ್ಲವನ್ನೂ ಹೇಳಿಕೊಳ್ಳೋದು ಆತ್ಮೀಯರ ಬಳಿ ಮಾತ್ರ.

ನೀವು ಯಾರನ್ನಾದ್ರೂ ಇಷ್ಟಪಟ್ಟರೆ ಅವರ ಬಳಿ ಬಂದಾಗ, ಮಾತನಾಡುವಾಗ ಕೊಂಚ ನಾಚಿಕೆಯ ಭಾವನೆ ಉಂಟಾಗುತ್ತದೆ. ಒಮ್ಮೊಮ್ಮೆ ಮಾತನಾಡಲು ತಡವರಿಸುವುದುಂಟು. ನೇರವಾಗಿ ಮುಖ ನೋಡಲು ಕೂಡ ಹಿಂಜರಿಯುತ್ತಾರೆ. ಹಾಗೇನಾದ್ರೂ ಕಂಡುಬಂದ್ರೆ ಆತ ನಿಮ್ಮನ್ನು ಪ್ರೀತಿಸ್ತಾನೆ ಅಂತಾನೇ ಅರ್ಥ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...