alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ವಾಸ ಮಾಡುವವರಿಗೆ ಸರ್ಕಾರ ನೀಡುತ್ತೆ ಹಣ

money_evftpxg

ವಿಶ್ವದ ಯಾವ ಸ್ಥಳದಲ್ಲಿ ನೀವು ವಾಸ ಮಾಡಿದ್ರೂ ಅಲ್ಪಸ್ವಲ್ಪ ಹಣವನ್ನು ಯಾವುದೋ ರೂಪದಲ್ಲಿ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಆದ್ರೆ ಕೆಲವೊಂದು ಸ್ಥಳದಲ್ಲಿ ನೀವು ವಾಸ ಮಾಡಿದ್ರೆ ಸರ್ಕಾರಕ್ಕೆ ಹಣ ನೀಡುವ ಬದಲು ಸರ್ಕಾರವೇ ನಿಮಗೆ ಹಣ ನೀಡುತ್ತದೆ.

ಜಗತ್ತಿನಲ್ಲಿ ಇಂತ ಕೆಲ ಸ್ಥಳಗಳಿವೆ. ಅಲ್ಲಿ ವಾಸಿಸುವ ಜನರಿಗೆ ಸರ್ಕಾರವೇ ಹಣ ನೀಡುತ್ತದೆ. ಅದ್ರಲ್ಲಿ ಸಾಸ್ಕಾಚೆವನ್ ಕೂಡ ಒಂದು. ಕೆನಡಾದ ಸಾಸ್ಕಾಚೆವನ್ ನಲ್ಲಿ ವ್ಯಾಪಾರ ಅಥವಾ ಉದ್ಯೋಗ ಮಾಡುವ ಪದವೀಧರರಿಗೆ 20 ಸಾವಿರ ಕೆನಡಿಯನ್ ಡಾಲರ್ ಅಂದ್ರೆ ಸುಮಾರು 10 ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ.

ಅಮೆರಿಕಾದ ಡೆಟ್ರಾಯಿಟ್ ನ್ನು ವಿಶ್ವದ ಆಟೋಮೊಬೈಲ್ ರಾಜಧಾನಿ ಎಂದೇ ಕರೆಯಲಾಗುತ್ತದೆ. 20 ನೇ ಶತಮಾನದಲ್ಲಿ ಇಲ್ಲಿನ ಜನಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಶುರುಮಾಡಿದೆ. ಇಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಹಾಗೂ ವ್ಯಾಪಾರಸ್ಥರಿಗೆ  ತಲಾ 2 ಲಕ್ಷ ರೂಪಾಯಿ ನೀಡ್ತಾ ಇದೆ.

ವಿಶ್ವದ ಸುಂದರ ಪ್ರದೇಶಗಳಲ್ಲಿ ನಯಾಗರಾ ಫಾಲ್ಸ್ ಕೂಡ ಒಂದು. ಇಲ್ಲಿ ಎರಡು ವರ್ಷ ಕೆಲಸ ಮಾಡುವ ಪದವೀಧರರಿಗೆ ಸರ್ಕಾರ ನಾಲ್ಕು ಲಕ್ಷದವರೆಗೆ ಹಣ ನೀಡುತ್ತದೆ.

ನೆದರ್ಲ್ಯಾಂಡ್ ನ  ಆಮ್ ಸ್ಟರ್ ಡ್ಯಾಂನಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ 67 ಸಾವಿರ ರೂಪಾಯಿ ನೀಡಲಾಗ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...