alex Certify
ಕನ್ನಡ ದುನಿಯಾ       Mobile App
       

Kannada Duniya

ಪರವಾನಿಗೆ ಇಲ್ಲದೆ ಭಾರತೀಯರಿಗೂ ಇಲ್ಲಿಲ್ಲ ಪ್ರವೇಶ….

place-sikkimವಿದೇಶೀಯರು ಭಾರತದಲ್ಲಿ ಸುತ್ತಾಡಬೇಕು ಅಂದ್ರೆ ಅದಕ್ಕಾಗಿ ಹತ್ತಾರು ಬಗೆಯ ದಾಖಲೆಗಳನ್ನು ಇಟ್ಟುಕೊಂಡಿರಬೇಕು, ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದಿರಬೇಕು. ಕೇವಲ ವಿದೇಶೀಯರು ಮಾತ್ರವಲ್ಲ ಭಾರತೀಯರು ಕೂಡ ನಮ್ಮ ದೇಶದ ಕೆಲವು ಪ್ರದೇಶಗಳಿಗೆ ಭೇಟಿ ನೀಡಬೇಕು ಅಂದ್ರೆ ಪರ್ಮಿಷನ್ ಬೇಕೇ ಬೇಕು.

ರಕ್ಷಿತ ಹಾಗೂ ನಿರ್ಬಂಧಿತ ಪ್ರದೇಶಗಳಿಗೆ ಭಾರತೀಯ ಪ್ರವಾಸಿಗರು ಪ್ರವೇಶಿಸಬೇಕೆಂದ್ರೆ ಇನ್ನರ್ ಲೈನ್ ಪರ್ಮಿಟ್ ಪಡೆಯುವುದು ಕಡ್ಡಾಯ. ಅಂತಹ 5 ಸ್ಥಳಗಳು ಯಾವುವು ಅನ್ನೋದನ್ನು ನೋಡೋಣ.

ಅರುಣಾಚಲ ಪ್ರದೇಶ : ಸ್ಥಳೀಯರನ್ನು ಹೊರತುಪಡಿಸಿ ಉಳಿದವರು ಅರುಣಾಚಲ ಪ್ರದೇಶ ಪ್ರವೇಶಿಸಲು ಇನ್ನರ್ ಲೈನ್ ಪರ್ಮಿಟ್ ಪಡೆಯಬೇಕು. ಚೀನಾ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವುದರಿಂದ ಅರುಣಾಚಲ ಪ್ರದೇಶ ನಿರ್ಬಂಧಿತ ಪ್ರದೇಶಗಳ ಪಟ್ಟಿಯಲ್ಲಿದೆ. ತವಾಂಗ್, ರೋಯಿಂಗ್, ಇಟಾನಗರ, ಬೊಮ್ಡಿಲಾ, ಜಿರೋ, ಭಲುಕ್ಪೊಂಗ್, ಪಸಿಘಾಟ್, ಅನಿನಿ ಮತ್ತು ಅಲೊಂಗ್ ಅರುಣಾಚಲಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳು.

ಮಿಜೋರಾಂ : ಆಹ್ಲಾದಕರ ವಾತಾವರಣ ಹೊಂದಿರುವ ಸುಂದರ ಸ್ಥಳ ಮಿಜೋರಾಂ. ವಿಶಿಷ್ಟ ಸಂಪ್ರದಾಯ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಬುಡಕಟ್ಟು ಜನಾಂಗದವರ ನೆಲೆ ಮಿಜೋರಾಂ. Phawngpui ಹಿಲ್ಸ್, Vantawang ಜಲಪಾತ, ಪಲಕ್ ಸರೋವರ, ಚಿಂಗ್ಪುಯ್ ಪಾರಂಪರಿಕ ತಾಣಗಳು ಹಾಗೂ ಸ್ಥಳೀಯ ನೃತ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಲೆಂಗ್ಪುಯ್ ವಿಮಾನ ನಿಲ್ದಾಣ, ಶಿಲ್ಲಾಂಗ್, ದೆಹಲಿ, ಕೋಲ್ಕತ್ತಾ, ಸಿಲ್ಚಾರ್ ಮತ್ತು ಗುವಾಹಟಿಯಲ್ಲಿ ಇನ್ನರ್ ಲೈನ್ ಪರ್ಮಿಟ್ ಪಡೆಯಬಹುದು.

ಲಡಾಕ್ : ಜಮ್ಮು ಮತ್ತು ಕಾಶ್ಮೀರ ಅತ್ಯಂತ ಚೆಲುವಿನ ಹಾಗೂ ಸೂಕ್ಷ್ಮವಾದ ರಾಜ್ಯ. ಪಾಕಿಸ್ತಾನ ಹಾಗೂ ಚೀನಾ ಗಡಿಯಲ್ಲಿರುವ ಲಡಾಕ್ ಅಂತೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದ್ರೆ ಲಡಾಕ್ ನ ಎಲ್ಲಾ ಪ್ರದೇಶಗಳಿಗೂ ಪ್ರವಾಸಿಗರಿಗೆ ಪ್ರವೇಶವಿಲ್ಲ. ಚಂಗ್ ಥಾಂಗ್, ಹನ್ಲೆ, ಲೋಮಾ, ಚಂಗ್ ಥಾಂಗ್ ಕಣಿವೆ, ಲೋಮಾ, ಮಾರ್ಸಿಮಿಕ್ ಲಾ ಮತ್ತು ಚುಮುರ್ ಪ್ರವಾಸಿಗರು ನೋಡಲೇಬೇಕಾದ ಸ್ಥಳಗಳು. ಚುಶುಲ್ ಮತ್ತು ಹನ್ಲೆಯಲ್ಲಿ ಸೈನಿಕರು ನಿಮಗೆ ಪ್ರವೇಶಾವಕಾಶ ನೀಡದೇ ಇರಬಹುದು.

ಸಿಕ್ಕಿಂ : ಮೂರು ರಾಷ್ಟ್ರಗಳ ಗಡಿ ಹಂಚಿಕೊಂಡಿರುವ ಸಿಕ್ಕಿಂನಲ್ಲೂ ಪ್ರವೇಶಕ್ಕೆ ಹಲವು ನಿರ್ಬಂಧಗಳಿವೆ. ತ್ಸೋಮ್ಗೋ ಸರೋವರ, ನಥುಲ್ಲಾ, Dzongri & Goechala Trek, ಯುಮ್ಥಾಂಗ್, ಯುಮೆಸಾಮ್ಡೊಂಗ್, ಥಂಗು, ಚೋಪ್ಟಾ ಕಣಿವೆ, ಗುರುಡೊಂಗ್ಮರ್ ಸರೋವರಕ್ಕೆ ಪ್ರವೇಶಿಸಲು ಅನುಮತಿ ಪಡೆಯಬೇಕು. ಬಗ್ದೋಗ್ರಾ ವಿಮಾನ ನಿಲ್ದಾಣ, ರಾಂಗ್ಪೋ ಚೆಕ್ ಪೋಸ್ಟ್, ಸಿಲಿಗುರಿ, ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಪರ್ಮಿಟ್ ಪಡೆಯಬಹುದು.

ನಾಗಾಲ್ಯಾಂಡ್ : ಇಲ್ಲಿಗೆ ಬರಬೇಕಂದ್ರೆ ಭಾರತದ ಪ್ರವಾಸಿಗರಿಗೂ ಇನ್ನರ್ ಲೈನ್ ಪರ್ಮಿಟ್ ಬೇಕು. ಕೋಹಿಮಾ, ದಿಮಾಪುರ್, ಮೊಕೊಕ್ಚುಂಗ್, ವೋಖಾ, ಮೊನ್, ಫೆಕ್, ಕಿಫಿರೆ ಪ್ರವಾಸಿಗರನ್ನು ಸೆಳೆಯುವ ಸ್ಥಳಗಳು. ದಿಮಾಪುರದ ಡೆಪ್ಯೂಟಿ ಕಮಿಷನರ್ ಬಳಿ ಪ್ರವಾಸಿಗರು ಇನ್ನರ್ ಲೈನ್ ಪರ್ಮಿಟ್ ಪಡೆಯಬಹುದು. ಕೋಹಿಮಾ, ಮೊಕೊಕ್ಚುಂಗ್, ನವದೆಹಲಿ, ಕೋಲ್ಕತ್ತಾ ಮತ್ತು ಶಿಲ್ಲಾಂಗ್ ನಲ್ಲೂ ಐ ಎಲ್ ಪಿ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...