alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿ ನಂತರ ಈ ಕ್ರಿಕೆಟಿಗರು ಮಾಡ್ತಿರೋದೇನು..?

cricketಆಟಗಾರರಿಗೆ ನಿವೃತ್ತಿ ಎಂಬುದು ವೃತ್ತಿ ಜೀವನದಲ್ಲಿ ಅತಿ ನೋವಿನ ಸಂಗತಿ. ಅದರಲ್ಲೂ ಜನಪ್ರಿಯ ಆಟವಾದ ಕ್ರಿಕೆಟ್ ನಲ್ಲಿ ಹಣ, ಜನಪ್ರಿಯತೆ ಕಂಡವರಿಗೆ ನಿವೃತ್ತಿ ನಂತರ ಮುಂದೇನು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಬಹಳಷ್ಟು ಮಂದಿ ನಿವೃತ್ತ ಆಟಗಾರರು ವೀಕ್ಷಕ ವಿವರಣೆ ಸೇರಿದಂತೆ ಕ್ರಿಕೆಟ್ ನ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡರೆ ಮತ್ತೆ ಕೆಲವರು ಕ್ರಿಕೆಟ್ ಗೆ ಸಂಬಂಧವೇ ಇಲ್ಲದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪಾಕಿಸ್ತಾನದ ಅರ್ಶದ್ ಖಾನ್ ತಮ್ಮ ತಂಡದ ಪರ 9 ಟೆಸ್ಟ್ ಪಂದ್ಯಗಳನ್ನಾಡಿದ್ದು, 32 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್ ನಲ್ಲಿ ಅಷ್ಟೇನೂ ಯಶಸ್ಸು ಸಾಧಿಸದ ಅವರನ್ನು ಆನೇಕ ಬಾರಿ ಕೈ ಬಿಡಲಾಗಿತ್ತು. ಕಡೆಗೆ ನಿವೃತ್ತಿ ಘೋಷಿಸಿದ ಅವರು ಆಸ್ಟ್ರೇಲಿಯಾದಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಇಂಗ್ಲೆಂಡ್ ನ ಡೇವಿಡ್ ಶೆಫರ್ಡ್ ತಮ್ಮ ತಂಡದ ಪರ 22 ಟೆಸ್ಟ್ ಪಂದ್ಯಗಳನ್ನಾಡಿದ್ದು, ಮೂರು ಸೆಂಚುರಿ ಬಾರಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 230 ಪಂದ್ಯಗಳನ್ನಾಡಿರುವ ಅವರು, ಇದರಲ್ಲಿ 45 ಶತಕ ಗಳಿಸಿದ್ದಾರೆ. ಕ್ರಿಕೆಟ್ ನಿಂದ ನಿವೃತ್ತರಾದ ನಂತರ ಲಿವರ್ ಪೂಲ್ ನ ಚರ್ಚ್ ನಲ್ಲಿ ಬಿಷಪ್ ಆಗಿ ಕಾರ್ಯ ನಿರ್ವಹಿಸಿದ್ದ ಡೇವಿಡ್ ಶೆಫರ್ಡ್, 2005 ರಲ್ಲಿ ಕ್ಯಾನ್ಸರ್ ನಿಂದಾಗಿ ನಿಧನರಾದರು.

1972 ರಲ್ಲಿ ಭಾರತದ ವಿರುದ್ದದ ಪಂದ್ಯದಲ್ಲಿ ಕ್ರಿಕೆಟ್ ಗೆ ಕಾಲಿಟ್ಟ ಇಂಗ್ಲೆಂಡ್ ತಂಡದ ಆಟಗಾರ ಕ್ರಿಸ್ ಓಲ್ಡ್, ನಿವೃತ್ತಿ ಬಳಿಕ ತಮ್ಮ ಪತ್ನಿಯ ಜೊತೆಗೂಡಿ ಕಾರ್ನಿವಾಲ್ ನ ಪ್ರಾ ಸ್ಯಾಂಡ್ಸ್ ನಲ್ಲಿ ಫಿಶ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇಂಗ್ಲೆಂಡ್ ನ ಅಲ್ ರೌಂಡರ್ ಕ್ರಿಸ್ ಲೆವಿಸ್ ಅವರದ್ದು ಮತ್ತೊಂದು ಕಥೆ. ಜ್ಯೂಸ್ ಕ್ಯಾನ್ ನಲ್ಲಿ ಮಾದಕ ಪದಾರ್ಥ ಕೋಕೆಯ್ನ್ ಸಾಗಿಸುವಾಗ ಸಿಕ್ಕಿ ಬಿದ್ದಿದ್ದ ಆತ ಶಿಕ್ಷೆಗೊಳಗಾಗಿದ್ದು, ಇದೀಗ ಯುವ ಜನತೆಗೆ ಕ್ರೀಡೆಯಲ್ಲಿನ ಅಪಾಯಗಳ ಕುರಿತು ಮಾರ್ಗದರ್ಶನ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರರಾಗಿದ್ದ ಕರ್ಟ್ಲಿ ಅಂಬ್ರ್ಯೂಸ್, ನಿವೃತ್ತಿ ಬಳಿಕ ‘ಡ್ರೀಡ್ ಅಂಡ್ ಬಾಲ್ಡ್ ಹೆಡ್’ ಎಂಬ ಬ್ಯಾಂಡ್ ತಂಡವನ್ನು ಸೇರಿಕೊಂಡು ಗಿಟಾರಿಸ್ಟ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...