alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಲ ತೀರಕ್ಕೆ ಬಂತು ಬೃಹತ್ ತಿಮಿಂಗಿಲ

dead-whal

ಭುವನೇಶ್ವರ್: ಒಡಿಶಾದ ಕಡಲ ತೀರದಲ್ಲಿ ಬರೋಬ್ಬರಿ 42 ಅಡಿ ಉದ್ದ, 28 ಅಡಿ ಅಗಲದ ಬೃಹತ್ ಮೃತ ತಿಮಿಂಗಿಲ ಕಂಡು ಬಂದಿದೆ.

ಪುರಿ ಜಿಲ್ಲೆಯ ಬೈದಾರ ಬಳಿಯ ಪೆಂಥಾ ಕಡಲ ತೀರದಲ್ಲಿ ಭಾನುವಾರ ಬೃಹತ್ ತಿಮಿಂಗಿಲ ಕಂಡು ಬಂದಿದ್ದು, ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯ ಜನ ಜಮಾಯಿಸಿದ್ದಾರೆ. ಪೆಸಿಫಿಕ್ ಸಾಗರದಲ್ಲಿ ಕಾಣಸಿಗುವ ಅಪರೂಪದ ತಿಮಿಂಗಿಲ ಇದಾಗಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ವಿವಿಧ ಇಲಾಖೆ ಅಧಿಕಾರಿಗಳು ತಿಮಿಂಗಿಲವನ್ನು ವಶಕ್ಕೆ ಪಡೆದಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ತಿಮಿಂಗಿಲದ ಸಾವಿಗೆ ಕಾರಣ ಗೊತ್ತಾಗಲಿದೆ. ಸುಮಾರು 15 ದಿನಗಳ ಹಿಂದೆಯೇ ಇದು ಮೃತಪಟ್ಟಿದ್ದು, ಅಲೆಗಳಿಗೆ ಸಿಲುಕಿ ದಡಕ್ಕೆ ಬಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ಅಚ್ಯುತಾನಂದ ದಾಸ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...