alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ದಿನದಲ್ಲಿ ದಢೂತಿ ಮಹಿಳೆ ತೂಕ ಎಷ್ಟು ಇಳಿದಿದೆ ಗೊತ್ತಾ?

eman_1487322207

ಐದು ದಿನಗಳ ಹಿಂದಷ್ಟೇ ಈಜಿಪ್ಟ್ ನಿಂದ ಭಾರತಕ್ಕೆ ಬಂದಿರುವ ವಿಶ್ವದ ದಢೂತಿ ಮಹಿಳೆ ಇಮಾನ್ ಅಹ್ಮದ್ ತೂಕದಲ್ಲಿ ಇಳಿಕೆಯಾಗಿದೆ. 500 ಕೆ.ಜಿ ಇದ್ದ ಮಹಿಳೆ ತೂಕ 30 ಕೆ.ಜಿ ಇಳಿದಿದೆ. ಇಮಾನ್ ಆರೋಗ್ಯದಲ್ಲಿಯೂ ಸಾಕಷ್ಟು ಸುಧಾರಣೆಯಾಗಿದೆ.

ಇಮಾನ್ 8 ತಾಸುಗಳ ಕಾಲ ಸುಖವಾಗಿ ನಿದ್ರೆ ಮಾಡಿದ್ದಾಳೆ. ಅಂಗಗಳು ಚಲನೆ ಶುರುಮಾಡಿದ್ದು, ವೈದ್ಯರಿಗೆ ಧನ್ಯವಾದ ಹೇಳಿದ್ದಾಳೆ ಇಮಾನ್. ಈಜಿಪ್ಟ್ ನಿಂದ ಭಾರತಕ್ಕೆ ಬಂದು ಐದು ದಿನ ಕಳೆದಿದ್ದು, ಆರೋಗ್ಯದಲ್ಲಿ ಸುಧಾರಣೆ ಕಾಣ್ತಾ ಇದೆ. ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಾ ಇದೆ. ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಬೊಜ್ಜು ಸೇರಿದಂತೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗ್ತಾ ಇದೆ.

ಮೊದಲ ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ವೈದ್ಯರು, ಮೊದಲು ಇಮಾನ್ ತೂಕ ಇಳಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಆಪರೇಷನ್ ಟೇಬಲ್ 450 ಕೆ.ಜಿ ತೂಕವನ್ನು ಮಾತ್ರ ತಡೆಯಬಲ್ಲದು. ಇಮಾನ್ ಅಗಲ ಕೂಡ ಹೆಚ್ಚಿದ್ದು ತೂಕ ಕಡಿಮೆಯಾದ ನಂತ್ರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...