alex Certify
ಕನ್ನಡ ದುನಿಯಾ       Mobile App
       

Kannada Duniya

‘ಫೋರ್ಬ್ಸ್’ ಸೂಪರ್ ಸಾಧಕರ ಪಟ್ಟಿಯಲ್ಲಿ 30 ಭಾರತೀಯರು

fo

ಭಾರತೀಯ ಮೂಲದ ಸಂಶೋಧಕರು, ಉದ್ಯಮಿಗಳು ಮತ್ತು ಲೀಡರ್ ಗಳು 2017 ರ ಫೋರ್ಬ್ಸ್ ಸೂಪರ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕೈಗಾರಿಕೆ, ಆರೋಗ್ಯ, ಉತ್ಪಾದನೆ, ಹಣಕಾಸು, ಕ್ರೀಡೆ ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಸಾಧನೆ ಮಾಡಿದ 30 ವರ್ಷದೊಳಗಿನವರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ 30 ಭಾರತೀಯರು ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿರುವ ಸಾಧಕರು ಇಡೀ ವಿಶ್ವವನ್ನೇ ಬದಲಾಯಿಸಲು ಸಮರ್ಥರು. ತಮ್ಮ ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ.

ಫೋರ್ಬ್ಸ್ ಸಾಧಕರಲ್ಲಿ ನಿಯೋಲೈಟ್ ಕಂಪನಿಯ ಸಹ ಸಂಸ್ಥಾಪಕ ವಿವೇಕ್ ಕೊಪ್ಪರ್ಥಿ ಕೂಡ ಒಬ್ಬರು. ಡ್ರೋನ್ ಮೂಲಕ ಜನರಿಗೆ ಚಿಕಿತ್ಸೆ ನೀಡುತ್ತಿರುವ ಜಿಪ್ ಲೈನ್ ಕಂಪನಿಯ ಪ್ರಾರ್ಥನಾ ದೇಸಾಯಿ ಸಹ ಭಾರತಕ್ಕೆ ಗೌರವ ತಂದಿದ್ದಾರೆ. ಹಾರ್ವರ್ಡ್ ವೈದ್ಯಕೀಯ ಶಾಲೆಯ ಆರ್ಥೋಪೆಡಿಕ್ ಸರ್ಜರಿ ಮುಖ್ಯಸ್ಥರಾಗಿರುವ ಶಾನ್ ಪಟೇಲ್, 17 ರ ಹರೆಯದ ರೋಹನ್ ಸೂರಿ, ವರುಣ್ ಶಿವರಾಮ್, ಉದ್ಯಮಿ ನೇಹಾ ಗುಪ್ತಾ, ಕಿಸಾನ್ ನೆಟ್ವರ್ಕ್ ನ ಆದಿತ್ಯ ಅಗರ್ವಾಲ್, ಅಮೆರಿಕದ ಫುಟ್ಬಾಲ್ ತಂಡವೊಂದರ ಉಪಾಧ್ಯಕ್ಷರಾಗಿರೋ ಅಕ್ಷಯ್ ಖನ್ನಾ ಸೇರಿದಂತೆ ಒಟ್ಟು 30 ಭಾರತೀಯರನ್ನು ಸೂಪರ್ ಸಾಧಕರು ಅಂತಾ ಫೋರ್ಬ್ಸ್ ಗುರುತಿಸಿದೆ.

Subscribe Newsletter

Get latest updates on your inbox...

Opinion Poll

  • ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪರಾಭವಕ್ಕೆ ಕೊಹ್ಲಿ ತಪ್ಪು ನಿರ್ಧಾರ ಕಾರಣವೇ..?

    View Results

    Loading ... Loading ...