alex Certify
ಕನ್ನಡ ದುನಿಯಾ       Mobile App
       

Kannada Duniya

25 ವರ್ಷಗಳ ಬಳಿಕ ತಂದೆಯ ಕೊನೆಯಾಸೆ ಈಡೇರಿಸಿದ ಪುತ್ರಿ

1992ರಲ್ಲಿ ತಂದೆಯ ಹತ್ಯೆಯಾದಾಗ ಅಂಜುಮ್ ಸೈಫಿಗೆ ಕೇವಲ 4 ವರ್ಷ. ಅಂಜುಮ್ ತಂದೆ ರಶೀದ್ ಅಹ್ಮದ್ ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ರು. ಮಾರುಕಟ್ಟೆಯಲ್ಲಿ ಹಫ್ತಾ ವಸೂಲಿ ಮಾಡುವ ಗೂಂಡಾಗಳ ವಿರುದ್ಧ ರಶೀದ್ ಧ್ವನಿಯೆತ್ತಿದ್ರು.

ಅವರಿಗೆ ಜೀವ ಬೆದರಿಕೆ ಕೂಡ ಇತ್ತು. ಬೀದಿ ವ್ಯಾಪಾರಿಯೊಬ್ಬನ ಬಳಿ ಸುಲಿಗೆ ಮಾಡ್ತಾ ಇದ್ದ ಗೂಂಡಾಗಳ ಕ್ರಮವನ್ನು ರಶೀದ್ ವಿರೋಧಿಸಿದ್ರು. ಇದ್ರಿಂದ ರೊಚ್ಚಿಗೆದ್ದ ಗೂಂಡಾಗಳು ಹಾಡಹಗಲೇ ಗುಂಡು ಹಾರಿಸಿ ರಶೀದ್ ರನ್ನು ಹತ್ಯೆ ಮಾಡಿದ್ರು. ಮಗಳು ನ್ಯಾಯಾಧೀಶೆ ಆಗಬೇಕು ಅನ್ನೋದು ರಶೀದ್ ರ ಆಸೆಯಾಗಿತ್ತು.

ತಂದೆ ಮೃತಪಟ್ಟು 25 ವರ್ಷಗಳ ನಂತರ ಅಂಜುಮ್ ಅವರ ಕೊನೆಯಾಸೆಯನ್ನು ಈಡೇರಿಸಿದ್ದಾಳೆ. ಉತ್ತರ ಪ್ರದೇಶದ ಸಿವಿಲ್ ಜಡ್ಜ್ ಜೂನಿಯರ್ ಡಿವಿಶನ್ ಪರೀಕ್ಷೆಯನ್ನು ಪಾಸ್ ಮಾಡಿದ್ದಾಳೆ. ಈ ಖುಷಿಯ ಸಂದರ್ಭದಲ್ಲಿ ಅಂಜುಮ್ ತಂದೆಯನ್ನು ತುಂಬಾನೇ ಮಿಸ್ ಮಾಡಿಕೊಳ್ತಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...