alex Certify
ಕನ್ನಡ ದುನಿಯಾ       Mobile App
       

Kannada Duniya

ಸೃಷ್ಟಿಯ ಅದ್ಭುತ 18 ತಿಂಗಳ ಈ ಪುಟ್ಟ ಬಾಲೆ !

18-mth-old knows 26 currencies, 7 wondersಅಂಬೆಗಾಲಿಕ್ಕಿ ಒಂದೊಂದೇ ಹೆಜ್ಜೆಯಿಟ್ಟು ನಡೆಯುವುದನ್ನು ಕಲಿಯುವ ವಯಸ್ಸಿನ ಮಗು 26 ದೇಶಗಳ ನಾಣ್ಯಗಳನ್ನು ಮತ್ತು ಪ್ರಪಂಚದ ಏಳು ಅದ್ಭುತಗಳನ್ನು ಗುರುತಿಸುತ್ತದೆ ಎಂದರೆ ನೀವು ನಂಬುತ್ತೀರಾ?

ನಂಬಲೇಬೇಕು. ಏಕೆಂದರೆ ನಾಗಪುರದ 18 ತಿಂಗಳ ಅದ್ವಿಕಾ ಬಾಲೆ ಸ್ಪಷ್ಟವಾಗಿ ಮಾತನಾಡುವುದಲ್ಲದೇ ಅನೇಕ ದೇಶಗಳ ನಾಣ್ಯಗಳನ್ನು ಗುರುತಿಸುತ್ತಾಳೆ. ದೇಹದ ಅಂಗಾಂಗ ಮತ್ತು ಪ್ರಾಣಿಗಳ ಹೆಸರನ್ನು ಆಂಗ್ಲ ಭಾಷೆಯಿಂದ ಮರಾಠಿಗೆ ಭಾಷಾಂತರಿಸುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇವಳಿಗಿರುವ ಬುದ್ಧಿಶಕ್ತಿ, ಸ್ವತಃ ಅವಳ ತಂದೆ- ತಾಯಿಯನ್ನೇ ಬೆರಗುಗೊಳಿಸಿದೆ.

8-10 ತಿಂಗಳಿನಲ್ಲೇ ಅದ್ವಿಕಾ ಎಲ್ಲ ಅಕ್ಷರ, ಪ್ರಾಣಿ, ಹಣ್ಣುಗಳನ್ನು ಗುರುತಿಸಲು ಆರಂಭಿಸಿದ್ದಳು. ಅದ್ವಿಕಾಳ ಈ ಬುದ್ಧಿವಂತಿಕೆಯನ್ನು ಗಮನಿಸಿದ ಅವಳ ಅಮ್ಮ ಆಸಾವರಿ ಬಾಲೆ, ಅವಳಿಗೆ ವಿವಿಧ ದೇಶ ಮತ್ತು ಅವುಗಳ ನಾಣ್ಯಗಳ ಬಗ್ಗೆ ಕಲಿಸಿದರು. ಈಗ 18 ತಿಂಗಳಿನವಳಾಗಿರುವ ಅದ್ವಿಕಾ ಸಲೀಸಾಗಿ 100 ಪ್ರಶ್ನೆಗಳಿಗೆ ಉತ್ತರಿಸುವಷ್ಟು ಚಾಣಾಕ್ಷತೆ ಹೊಂದಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಅದ್ವಿಕಾಳಿಗೆ ಓದಿನ ಹಸಿವು ತುಂಬಾ ಇದೆ ಎಂದು ಅವಳ ತಂದೆ- ತಾಯಿ ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...