alex Certify
ಕನ್ನಡ ದುನಿಯಾ       Mobile App
       

Kannada Duniya

ಓದು ಬಿಟ್ಟು ಸನ್ಯಾಸಿಯಾಗ್ತಿದ್ದಾನೆ ಶೇ. 99 ಅಂಕ ಗಳಿಸಿದ ವಿದ್ಯಾರ್ಥಿ..!

topper

ದ್ವಿತೀಯ ಪಿಯುಸಿಯಲ್ಲಿ ಶೇ. 99 ಅಂಕ ಗಳಿಸಿದ ವಿದ್ಯಾರ್ಥಿಗಳ ಗುರಿ ಎಂಜಿನಿಯರ್ ಅಥವಾ ಡಾಕ್ಟರ್. ಸಾಮಾನ್ಯವಾಗಿ ವಿಜ್ಞಾನ ವಿಭಾಗದಲ್ಲಿ ಇಷ್ಟೊಂದು ಅಂಕಪಡೆದವರು ಈ ಎರಡು ಕ್ಷೇತ್ರಗಳಲ್ಲಿ ಒಂದನ್ನು ಆಯ್ದುಕೊಂಡು ಓದು ಮುಂದುವರೆಸ್ತಾರೆ. ಆದ್ರೆ ಶೇ.99 ಅಂಕ ಪಡೆದ 17 ವರ್ಷದ ವಿದ್ಯಾರ್ಥಿ ಓದು ಮುಂದುವರಿಸದಿರಲು ನಿರ್ಧರಿಸಿದ್ದಾನೆ.

ಆಶ್ಚರ್ಯವಾದ್ರೂ ಇದು ಸತ್ಯ. ದ್ವಿತೀಯ ಪಿಯುಸಿ ಸೈನ್ಸ್ ವಿಭಾಗದಲ್ಲಿ ಶೇ. 99 ಅಂಕ ಗಳಿಸಿದ್ದ ವರ್ಷಿಲ್ ಮುಂದಿನ ಗುರಿ ಸನ್ಯಾಸಿಯಾಗುವುದು. ತಂದೆ-ತಾಯಿಯ ಅನುಮತಿ ಪಡೆದಿರುವ ವರ್ಶಿಲ್ ಜೈನ ಸನ್ಯಾಸಿಯಾಗುವ ಮಹತ್ವದ ನಿರ್ಧಾರ ಕೈಗೊಂಡಿದ್ದಾನೆ. ವರ್ಶಿಲ್ ನಿರ್ಧಾರಕ್ಕೆ ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರ ಒಪ್ಪಿಗೆ ಇದೆ. ಗುರುವಾರ ಜೂನ್ 8ರಂದು ಸೂರತ್ ನಲ್ಲಿ ವರ್ಶಿಲ್ ದೀಕ್ಷೆ ಪಡೆಯಲಿದ್ದಾನೆ.

ವರ್ಶಿಲ್ ತಂದೆ ಆದಾಯ ತೆರಿಗೆ ಇಲಾಖೆಯಲ್ಲಿ ಇನ್ಸ್ ಪೆಕ್ಟರ್. ಅವರ ಪ್ರಕಾರ ಅವರ ಪತ್ನಿ ಆಧ್ಯಾತ್ಮವನ್ನು ಬಲವಾಗಿ ನಂಬುತ್ತಾರೆ. ವರ್ಶಿಲ್ ಹಾಗೂ ಆತನ ಸಹೋದರಿಗೂ ಆಧ್ಯಾತ್ಮದ ಬಗ್ಗೆ ಒಲವಿತ್ತು. ರಜೆಯಲ್ಲಿ ಪ್ರವಾಸಕ್ಕೆ ಹೋಗುವ ಬದಲು ದೇವರ ಮುಂದೆ ಕುಳಿತಿರುತ್ತಿದ್ದನಂತೆ ವರ್ಶಿಲ್. ಆತನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆವು. ಆದ್ರೆ ಮೊದಲ ಬಾರಿ ವರ್ಶಿಲ್ ಸನ್ಯಾಸಿಯಾಗುವ ಆಸೆ ವ್ಯಕ್ತಪಡಿಸಿದ್ದ. ಆತನ ಖುಷಿಯಲ್ಲಿ ನಾವು ಖುಷಿ ಕಾಣುವ ನಿರ್ಧಾರಕ್ಕೆ ಬಂದು ಒಪ್ಪಿಗೆ ನೀಡಿದ್ವಿ ಎನ್ನುತ್ತಾರೆ ತಂದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...