alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷದ ಪೋರ ಕಂಪ್ಯೂಟರ್ ಹ್ಯಾಕ್ ಮಾಡಿ ಆದ ನಷ್ಟವೆಷ್ಟು ಗೊತ್ತಾ?

jonathan-james-person-photo-u1

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲೂ ಕಂಪ್ಯೂಟರ್ ಹಾಸುಹೊಕ್ಕಾಗಿದೆ. ಕಂಪ್ಯೂಟರ್, ಇಂಟರ್ನೆಟ್ ಗಳಿಂದ ಅನೇಕ ಉಪಯೋಗಗಳಾಗುತ್ತಿರುವುದನ್ನು ನಾವು ದಿನೇ ದಿನೇ ನೋಡುತ್ತಿರುತ್ತೇವೆ. ಒಂದೇ ಒಂದು ಕ್ಲಿಕ್ ನಲ್ಲಿ ನಾವು ಮಹತ್ವದ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಇಂತಹ ಕಂಪ್ಯೂಟರನ್ನೇ ಕೆಲವರು ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಾರೆ. ಉದ್ದೇಶಪೂರ್ವಕವಾಗಿಯೋ ಅಥವಾ ಯಾವುದೋ ಆಮಿಷಕ್ಕೆ ಬಲಿಯಾಗಿ ‘ಹ್ಯಾಕಿಂಗ್’ ಪ್ರಪಂಚಕ್ಕೆ ಕಾಲಿರಿಸುತ್ತಾರೆ. ತಮ್ಮ ಬುದ್ಧಿವಂತಿಕೆಯನ್ನು ಕೆಟ್ಟ ಉದ್ದೇಶಗಳಿಗೆ ಬಳಸಿಕೊಳ್ಳುತ್ತಾರೆ. ಅಂತಹ ಒಬ್ಬ ಹ್ಯಾಕರ್ ಪರಿಚಯ ಇಲ್ಲಿದೆ ನೋಡಿ.

ಹೆಸರು ಜೋನಾಥನ್ ಜೇಮ್ಸ್. ವಯಸ್ಸು ಕೇವಲ 16. ಹ್ಯಾಕಿಂಗ್ ಪ್ರಪಂಚದಲ್ಲಿ ಅತೀ ಕಿರಿಯ ಎಂಬ ಕುಖ್ಯಾತಿ ಇವನದು. 1999 ರಲ್ಲಿ ಬೆಲ್ ಸೌತ್ ಮತ್ತು ಮಿಯಾಮಿ ಡೇಡ್ ಶಾಲೆಯ ನೆಟ್ ವರ್ಕ್ ಹ್ಯಾಕ್ ಮಾಡಿದ. ಇಷ್ಟೇ ಅಲ್ಲ ತನ್ನ ಬುದ್ಧಿವಂತಿಕೆಯಿಂದ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತ ಕೆಲಸವನ್ನೂ ಮಾಡಿದ್ದ.

ಅತೀ ಚಿಕ್ಕ ವಯಸ್ಸಿನಲ್ಲೇ ಈತ ಎಷ್ಟು ಬುದ್ಧಿವಂತನಾಗಿದ್ದನೆಂದರೆ ನಾಸಾ ಮತ್ತು ಡಿಫೆನ್ಸ್ ಡಾಟಾವನ್ನೇ ಹಾಳುಗೆಡವಿದ್ದ. ಹೀಗೆ ಇವನು ಹಾಳುಮಾಡಿದ ಸಾಪ್ಟ್ ವೇರ್ ಬೆಲೆ 1.7 ಮಿಲಿಯನ್. ಇದರಿಂದ ನಾಸಾ ತನ್ನ ವ್ಯವಸ್ಥೆಯನ್ನೇ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಯ್ತು. ಅಷ್ಟೇ ಅಲ್ಲದೇ ನಾಸಾ ಇದರಿಂದಾಗಿ  41 ಸಾವಿರ ಮಿಲಿಯನ್ ನಷ್ಟವನ್ನೂ ಅನುಭವಿಸಿತು. ಇಷ್ಟೆಲ್ಲ ಮಾಡಿದ ಇವನು ತನ್ನ ಮೇಲೆ ವೃಥಾ ಆಪಾದನೆ ಹೊರೆಸಲಾಗುತ್ತಿದೆ ಎಂದು 2008 ರಲ್ಲಿ ಆತ್ಮಹತ್ಯೆಗೆ ಶರಣಾದ. ಅಲ್ಲಿಗೆ ಒಬ್ಬ ವಿದ್ಯಾವಂತ ಕಂಪ್ಯೂಟರ್ ತಜ್ಞನ ಅಂತ್ಯವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...