alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋನ್ ಮೇಲೆ ಸಿಗ್ತಿದೆ 16 ಸಾವಿರ ರಿಯಾಯಿತಿ

phone

ಸದ್ಯ ಸ್ಮಾರ್ಟ್ ಫೋನ್ ಖರೀದಿಸುವ ಆಸೆ ನಿಮಗಿದ್ದರೆ,ಈ ಸುದ್ದಿ ನಿಮಗೆ ಉಪಯೋಗವಾಗಲಿದೆ. ಚೀನಾ ಕಂಪನಿ ಒನ್ ಪ್ಲಸ್ ಎಕ್ಸ್ ಚೇಂಜ್ ಆಫರ್ ಶುರುಮಾಡಿದೆ. ಈ ಆಫರ್ ನಲ್ಲಿ ಗ್ರಾಹಕ ತನ್ನ ಹಳೆ ಫೋನ್ ನೀಡಿ, ಹೊಸ ಸ್ಮಾರ್ಟ್ ಫೋನ್ ಖರೀದಿಸುವ ವೇಳೆ 16 ಸಾವಿರದಷ್ಟು ರಿಯಾಯಿತಿ ಸಿಗಲಿದೆ.

ಈ ಎಕ್ಸ್ ಚೇಂಜ್ ಆಫರ್ ನಲ್ಲಿ ಒನ್ ಪ್ಲಸ್ ಒನ್, ಒನ್ ಪ್ಲಸ್ 2 ಹಾಗೂ ಒನ್ ಪ್ಲಸ್ ಎಕ್ಸ್ ಸ್ಮಾರ್ಟ್ ಫೋನ್ ಖರೀದಿಸಬಹುದಾಗಿದೆ. ಕಂಪನಿ Riglob ಹಾಗೂ ಅಮೆಜಾನ್ ಜೊತೆ ಟೈಅಪ್ ಮಾಡಿಕೊಂಡಿದೆ. ಮೊಬೈಲ್ ಖರೀದಿಸಲು ಇಚ್ಛಿಸುವವರು ಮೊದಲು ಅಮೆಜಾನ್ ಆನ್ಲೈನ್ ಗೆ ಹೋಗಬೇಕು. ಅಲ್ಲಿ ಬೇಕಾದ ಮೊಬೈಲ್ ಖರೀದಿ ಮಾಡಬೇಕು. ನಂತ್ರ ಆದೇಶದ ಐಡಿಯನ್ನು ಮೊಬೈಲ್ ಬೈಬ್ಯಾಕ್ ನಲ್ಲಿ ನಮೂದಿಸಬೇಕು.

ಎಲ್ಲಾ ನಿಯಮಗಳನ್ನು ಪೂರ್ತಿಗೊಳಿಸಿದ ನಂತ್ರ ನಿಮ್ಮ ವಿಳಾಸವನ್ನು ನೀಡಬೇಕಾಗುತ್ತದೆ. Riglob ನಿಮ್ಮ ಹಳೆ ಮೊಬೈಲ್ ವಾಪಸ್ ಪಡೆಯುತ್ತದೆ. ಜೊತೆಗೆ ಹೊಸ ಮೊಬೈಲ್ ನಿಮ್ಮ ಕೈನಲ್ಲಿರುತ್ತದೆ. ಈ ಹಿಂದೆ ಕೂಡ ಈ ಕಂಪನಿ ಎಕ್ಸ್ ಚೇಂಜ್ ಆಫರ್ ತೆಗೆದುಕೊಂಡು ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...