alex Certify
ಕನ್ನಡ ದುನಿಯಾ       Mobile App
       

Kannada Duniya

2.95 ಲಕ್ಷ ರೂ. ಗಳಿಗೆ ಹರಾಜಾಗಿದೆ ಈ ನೋಟು

ಹಳೆ ನೋಟು, ನಾಣ್ಯ ಸಂಗ್ರಹಕಾರರು ಅಂತಹ ನೋಟು ಹಾಗೂ ನಾಣ್ಯಗಳಿಗೆ ಲಕ್ಷಾಂತರ ಹಣ ನೀಡಿ ಖರೀದಿಸುತ್ತಾರೆ. ಈಗ 2.5 ರೂ. ಮುಖಬೆಲೆಯ ನೂರು ವರ್ಷದ ನೋಟನ್ನು ವ್ಯಕ್ತಿಯೊಬ್ಬರು 2.95 ಲಕ್ಷ ರೂ. ನೀಡಿ ಖರೀದಿಸಿದ್ದಾರೆ.

ಭಾನುವಾರದಂದು ಈ ಹರಾಜು ನಡೆದಿದೆ ಎನ್ನಲಾಗಿದ್ದು, 1918 ರಲ್ಲಿ ಮುದ್ರಣವಾಗಿದ್ದ ಈ ನೋಟು ಈ ಮೊತ್ತಕ್ಕೆ ಹರಾಜಾಗಿದೆ. 2015 ರಲ್ಲಿ ಇದೇ ಸರಣಿಯ 2.5 ರೂ. ಮುಖಬೆಲೆಯ ನೋಟು 6.4 ಲಕ್ಷ ರೂಪಾಯಿಗೆ ಮಾರಾಟವಾಗಿತ್ತೆನ್ನಲಾಗಿದ್ದು, ಜಿ ಎಸ್ ಟಿ, 500 ಹಾಗೂ 1000 ಮುಖಬೆಲೆಯ ನೋಟುಗಳ ನಿಷೇಧ ಸೇರಿದಂತೆ ಕೆಲ ಕಾರಣಗಳಿಂದ ಈ ಬಾರಿ ನಿರೀಕ್ಷೆಗಿಂತ ಕಡಿಮೆ ಹಣ ಲಭಿಸಿದೆ ಎನ್ನಲಾಗಿದೆ.

ಬ್ರಿಟಿಷರ ಆಡಳಿತದ ವೇಳೆ ಮುದ್ರಣವಾಗಿದ್ದ ಈ 2.5 ಮುಖಬೆಲೆಯ ನೋಟು ಅಂದು ಒಂದು ಡಾಲರ್ ಗೆ ಸಮನಾಗಿತ್ತೆನ್ನಲಾಗಿದೆ. ಅಂದು ನಾಣ್ಯಗಳ ಚಲಾವಣೆ ಹೆಚ್ಚಿನ ಪ್ರಮಾಣದಲ್ಲಿದ್ದು, ನಾಣ್ಯ ಟಂಕಿಸಲು ಬೆಳ್ಳಿ ಕೊರತೆ ಕಂಡು ಬಂದಿದ್ದ ಕಾರಣ ಸಣ್ಣ ಪ್ರಮಾಣದಲ್ಲಿ ಈ ನೋಟುಗಳನ್ನು ಮುದ್ರಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...