alex Certify
ಕನ್ನಡ ದುನಿಯಾ       Mobile App
       

Kannada Duniya

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕೆಂದರೆ ಏನು ಮಾಡಬೇಕು ಗೊತ್ತಾ…?

ನಿದ್ದೆ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯ. ನಿದ್ದೆ ಚೆನ್ನಾಗಿ ಆದರೆ ಮಾತ್ರ ದಿನವಿಡೀ ಉಲ್ಲಾಸದಿಂದಿರೋಕೆ ಸಾಧ್ಯ. ತುಂಬಾ ಜನ ರಾತ್ರಿ ನಿದ್ದೆ ಬರದೇ ಒದ್ದಾಡುತ್ತಾರೆ. ಅಂಥವರಿಗೆಂದೇ ಚೆನ್ನಾಗಿ ನಿದ್ದೆ ಮಾಡೋಕೆ ಇಲ್ಲಿದೆ ನೋಡಿ ಟಿಪ್ಸ್.

ಹಗಲಿನಲ್ಲಿ ಬೆಳಕು ಮನೆಯಲ್ಲಿ ಬರುವಂತೆ ಮಾಡಿ. ಉತ್ತಮ ಬೆಳಕಿನಲ್ಲಿ ಕೆಲಸ ಮಾಡಿ.

ಸಂಜೆಯಾಗುತ್ತಲೇ ಬೆಳಕಿನ ಪ್ರಮಾಣ ಕಡಿಮೆ ಮಾಡಿ. ಮಲಗುವ 2 ಗಂಟೆಗಳ ಮುನ್ನ ಟಿವಿ ಹಾಗೂ ಪ್ರಕಾಶಮಾನ ಬೆಳಕನ್ನು ಆರಿಸಿ.

ಮಲಗುವ 6 ಗಂಟೆಗಳ ಮುನ್ನ ಟೀ, ಕಾಫಿ ಕುಡಿಯಬೇಡಿ.

ಹಗಲು ಹೊತ್ತಿನಲ್ಲಿ ನಿದ್ದೆ ಕಡಿಮೆ ಮಾಡಿ.

ಮಲಗುವುದು ಹಾಗೂ ಏಳುವ ಸಮಯವನ್ನು ನಿಗದಿಪಡಿಸಿ.

ಮೆಲಟೋನಿನ್ ಅನ್ನೋ ಸಪ್ಲಿಮೆಂಟ್ ಬಳಸಿ. ಇದರಿಂದ ನಿದ್ರೆಯ ಹಾರ್ಮೋನುಗಳು ಜಾಗೃತವಾಗಿ ಮೆದುಳಿಗೆ ಸಂದೇಶ ನೀಡುತ್ತವೆ. ಒಳ್ಳೆಯ ನಿದ್ದೆ ಬರುತ್ತೆ.

ಕುಡಿತಕ್ಕೆ ಗುಡ್ ಬೈ ಹೇಳಿ.

ಬೆಡ್ ರೂಂ ಮಲಗಲು ಯೋಗ್ಯವಾಗಿರಲಿ. ಲೈಟ್ಸ್, ಪೀಠೋಪಕರಣ ಸರಿಯಾಗಿರಲಿ. ಗದ್ದಲದಿಂದ ಮುಕ್ತವಾಗಿರಲಿ.

ಬೆಡ್ ರೂಂ ಟೆಂಪರೇಚರ್ ಆಹ್ಲಾದಕರವಾಗಿರಲಿ.

ತಡರಾತ್ರಿ ಊಟ ಮಾಡಬೇಡಿ. ಮಲಗುವ ಕೆಲ ತಾಸುಗಳ ಮುನ್ನ ಊಟ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...