alex Certify ಪ್ರತಿದಿನ ಶೂಸ್ ಧರಿಸಿ ನಿಮ್ಮ ಪಾದ ದುರ್ವಾಸನೆ ಬೀರ್ತಿದ್ರೆ ನಿವಾರಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಶೂಸ್ ಧರಿಸಿ ನಿಮ್ಮ ಪಾದ ದುರ್ವಾಸನೆ ಬೀರ್ತಿದ್ರೆ ನಿವಾರಿಸಲು ಹೀಗೆ ಮಾಡಿ

ಯಾವಾಗಲೂ ಶೂ ಧರಿಸುವುದರಿಂದ ಕಾಲು ಹಾಗೂ ಪಾದ ವಾಸನೆಯಿಂದ ಕೂಡಿರುತ್ತದೆ. ಈ ವಾಸನೆ ನಮ್ಮ ಜೊತೆ ಕುಳಿತ ಬೇರೆಯವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಉಪಾಯ.

* ಸಂಜೆ ಮನೆಗೆ ಬಂದಾಗ ಒಂದು ಗ್ಲಾಸ್ ನೀರಿಗೆ ಎರಡು ಟೀ ಬ್ಯಾಗ್‌ ಹಾಕಿ ಚೆನ್ನಾಗಿ ಕುದಿಸಿ, ನಂತರ ಆ ನೀರನ್ನು ಬಕೆಟ್‌ ಗೆ ಸುರಿದು, ಅದಕ್ಕೆ ಸ್ವಲ್ಪ ತಣ್ಣೀರು ಸೇರಿಸಿ, ನಂತರ ಕಾಲುಗಳನ್ನು ಅದರಲ್ಲಿ ನೆನೆಸಿ ಇಪ್ಪತ್ತು ನಿಮಿಷ ಇಡಿ. ಈ ರೀತಿ ಮಾಡುವುದರಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

* ಕಾಲುಗಳನ್ನು ಚೆನ್ನಾಗಿ ತೊಳೆದ ಬಳಿಕ ಕಾಲನ್ನು ಒರೆಸಿ, ನಂತರ ಸ್ವಲ್ಪ ಹತ್ತಿಯ ಉಂಡೆಯನ್ನು ತೆಗೆದುಕೊಂಡು ಅದಕ್ಕೆ ಫುಟ್ ಸ್ಪ್ರೆ ಹಾಕಿ ಪಾದಕ್ಕೆ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಉಜ್ಜುವುದರಿಂದ ದುರ್ವಾಸನೆ ತಡೆಯಬಹುದು.

* ಟೀ ಬ್ಯಾಗ್‌ ಟ್ರೀಟ್‌ಮೆಂಟ್‌ ರೀತಿಯಲ್ಲೇ ಸ್ವಲ್ಪ ಮೌತ್‌ ವಾಶ್‌ ತೆಗೆದು ಅದನ್ನು ಹದ ಬಿಸಿ ನೀರಿಗೆ ಹಾಕಿ, ಅದರಲ್ಲಿ ಕಾಲನ್ನು 20 ನಿಮಿಷ ನೆನಸಿ ಇಡುವುದರಿಂದಲೂ ಕಾಲು ಬೆವರಿನ ದುರ್ವಾಸನೆ ಬೀರುವುದನ್ನು ತಡೆಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...