alex Certify ಅಡುಗೆಗೆ ಸಂಬಂಧಿಸಿದಂತೆ ಇಲ್ಲಿದೆ ಒಂದಷ್ಟು ಸುಲಭ ʼಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆಗೆ ಸಂಬಂಧಿಸಿದಂತೆ ಇಲ್ಲಿದೆ ಒಂದಷ್ಟು ಸುಲಭ ʼಟಿಪ್ಸ್ʼ

ಅಡುಗೆ ಮಾಡುವವರು ಬೇಗಬೇಗ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸಲು ಇಚ್ಚಿಸುತ್ತಾರೆ. ಇಲ್ಲಿವೆ ಅಡುಗೆ ಇನ್ನಷ್ಟು ರುಚಿಯಾಗಲು ಹಾಗೂ ಕೆಲಸ ಕಮ್ಮಿ ಮಾಡುವ ಸಲಹೆಗಳು.

* ಹೂಕೋಸು, ಎಲೆಕೋಸುಗಳನ್ನು ಉಪ್ಪು ಮಿಶ್ರಿತ ಬಿಸಿನೀರಿನಲ್ಲಿ ಮುಳುಗಿಸಿಟ್ಟರೆ ಸೇರಿಕೊಂಡಿರುವ ಹುಳುಗಳು ಹೊರಬರುತ್ತವೆ.

* ಬೆಂಡೆಕಾಯಿಗಳನ್ನು ತೊಳೆದು ಕತ್ತರಿಸಿ ಸ್ವಲ್ಪ ಸಮಯ ಬಟ್ಟೆಯ ಮೇಲೆ ಹರಡಿ, ಬಾಡಿಸಿದರೆ ಅಂಟು, ಜಿಗುಟು ಕಡಿಮೆಯಾಗುತ್ತದೆ.

* ಬೆಂಡೆಕಾಯಿ ಹೋಳುಗಳು ಲೋಳೆ ಆಗದಿರಲು ಸ್ವಲ್ಪ ಹುರಿದ ನಂತರ ಹುಣಸೆ ರಸ ಬೆರಸಬೇಕು.

* ಒಂದು ಚಮಚ ಮಜ್ಜಿಗೆ ಹಾಕಿದ ನೀರಿಗೆ ಬದನೆಕಾಯಿ ಹಾಗೂ ಬಾಳೆಕಾಯಿ ಹೋಳುಗಳನ್ನು ಹಾಕಿದರೆ ಕಪ್ಪಾಗುವುದಿಲ್ಲ.

* ಆಲೂಗಡ್ಡೆಗಳನ್ನು ಸ್ವಲ್ಪ ಉಪ್ಪು ನೀರಿನಲ್ಲಿ ನೆನೆಸಿದರೆ ಬೇಗನೇ ಬೇಯುತ್ತವೆ ಹಾಗೂ ಸಿಪ್ಪೆ ಸಲೀಸಾಗಿ ತೆಗೆಯಲು ಬರುತ್ತದೆ.

* ಹಾಗಲಕಾಯಿ ಕಹಿಯನ್ನು ಕಡಿಮೆಯಾಗಿಸಲು ಹೆಚ್ಚಿದ ಹೋಳುಗಳನ್ನು ಅರಿಶಿಣ ಉಪ್ಪನ್ನು ಸೇರಿಸಿದ ನೀರಿನಲ್ಲಿ ನೆನೆಸಿಡಬೇಕು.

* ಹಸಿಮೆಣಸಿನಕಾಯಿಗಳನ್ನು ಎಣ್ಣೆಯಲ್ಲಿ ಹುರಿದು ಉಪ್ಪು ಹಾಗೂ ನಿಂಬೆರಸ ಬೆರೆಸಿ ಅರೆದು ಇರಿಸಿದರೆ, ಪಲ್ಯ ಮಾಡುವಾಗ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...