alex Certify
ಕನ್ನಡ ದುನಿಯಾ       Mobile App
       

Kannada Duniya

ರೋಮ್ಯಾನ್ಸ್ ನಲ್ಲಿ ವೀಕ್ ಇರ್ತಾರೆ ಇಂಥ ಕೂದಲಿನ ಮಹಿಳೆಯರು

ಮಹಿಳೆಯರ ಕೂದಲು ಅವ್ರ ವ್ಯಕ್ತಿತ್ವವನ್ನೊಂದೇ ಅಲ್ಲ ಅವ್ರ ಆಲೋಚನೆ ಮತ್ತು ಸ್ವಭಾವವನ್ನೂ ಹೇಳುತ್ತದೆ. ವ್ಯಕ್ತಿಯ ಸ್ವಭಾವವನ್ನು ಅರಿಯಲು ಅವ್ರ ದೇಹದ ಭಾಗಗಳು ನೆರವಾಗುತ್ತವೆ. ಮಹಿಳೆಯೊಬ್ಬಳ ಸ್ವಭಾವವನ್ನು ಆಕೆಯ ಕೂದಲಿನ ಮೂಲಕ ಹೇಳಬಹುದಾಗಿದೆ.

ಉದ್ದ ಕೂದಲು : ಉದ್ದ ಕೂದಲಿರುವ ಮಹಿಳೆಯರು ಕಲ್ಪನಾ ಲೋಕದಿಂದ ದೂರವಿರುತ್ತಾರೆ. ತಮ್ಮ ಭಾವನೆಯನ್ನು ಅವರು ಯಾರ ಬಳಿಯೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳುವ ಅವರು ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ. ಜೊತೆಗೆ ಕಡಿಮೆ ಖರ್ಚು ಮಾಡುವ ಸ್ವಭಾವದವರಾಗಿರುತ್ತಾರೆ.

ಸಣ್ಣ ಕೂದಲು : ಸಣ್ಣ ಕೂದಲಿರುವ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡುವವರಾಗಿರುತ್ತಾರೆ. ಶಿಸ್ತಿನ ಜೀವನ ನಡೆಸುವ ಅವರು ಪ್ರೀತಿಯಲ್ಲಿ ಯಾರಿಗೂ ಮೋಸ ಮಾಡುವುದಿಲ್ಲ. ಸ್ವಭಾವದಲ್ಲಿ ಸಣ್ಣ ಕೂದಲಿನ ಹುಡುಗಿಯರು ಸ್ವಾರ್ಥಿಗಳಾಗಿರುತ್ತಾರೆ.

ಗುಂಗುರು ಕೂದಲು : ಈ ರೀತಿ ಕೂದಲಿರುವ ಹುಡುಗಿಯರು ಕಲಾಕಾರರಾಗಿರುತ್ತಾರೆ. ಕಲ್ಪನಾ ಲೋಕದಲ್ಲಿ ಇವರಿರುತ್ತಾರೆ. ಅದೃಷ್ಟ ಸದಾ ಇಂಥ ಹುಡುಗಿಯರ ಜೊತೆಗಿರುತ್ತದೆ.

ತೆಳ್ಳನೆಯ ಹಾಗೂ ಕಡಿಮೆ ಕೂದಲು : ಇಂಥ ಕೂದಲಿರುವ ಮಹಿಳೆಯರು ಕೆಲಸವನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಾರೆ. ರೋಮ್ಯಾನ್ಸ್ ವಿಚಾರದಲ್ಲಿ ಈ ಮಹಿಳೆಯರು ದುರ್ಬಲರಾಗಿರುತ್ತಾರೆ. ಪ್ರೀತಿಯನ್ನು ಯಾರ ಮುಂದೆಯೂ ಹೇಳುವುದಿಲ್ಲ. ಶಾಂತ ಜೀವನ ನಡೆಸಲು ಬಯಸುವ ಈ ಮಹಿಳೆಯರು ಗಲಾಟೆ ಮಾಡಿಕೊಳ್ಳಲು ಬಯಸುವುದಿಲ್ಲ.

ಚಿಕ್ಕ ಹಾಗೂ ದಪ್ಪ ಕೂದಲು : ಕೆಲಸವನ್ನು ಅತ್ಯುತ್ತಮವಾಗಿ ಮಾಡಲು ಈ ಹುಡುಗಿಯರು ಬಯಸುತ್ತಾರೆ. ಮನೆ ಹಾಗೂ ಪ್ರೀತಿ ವಿಚಾರದಲ್ಲಿ ಅವರ ನಡವಳಿಕೆ ಉತ್ತಮವಾಗಿರುತ್ತದೆ. ಈ ಮಹಿಳೆಯರು ಸಿಟ್ಟಾದ್ರೆ ಪರಿಸ್ಥಿತಿ ಕಠಿಣವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...