alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ

crowds-in-GZ

ಹೆಚ್ಚಾಗುತ್ತಿರುವ ಜನಸಂಖ್ಯೆ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗ್ತಾ ಇದೆ ಎಂಬುದಕ್ಕೆ ಚೀನಾ ಉತ್ತಮ ನಿದರ್ಶನ. ಅಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವಾಗದೆ ರೈಲ್ವೆ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಘಟನೆ ನಡೆದಿದೆ.

ಫೆಬ್ರವರಿ 8 ರಿಂದ ಚೀನಾದಲ್ಲಿ ಹೊಸ ವರ್ಷ ಶುರುವಾಗಲಿದೆ. ಈ ಸಂಭ್ರಮಾಚರಣೆಯಲ್ಲಿರುವ ಜನರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಹಾಗೆ ಸೋಮವಾರ ಚೀನಾದ ಗುವಾಂಗ್ಝೌನ ರೈಲ್ವೆ ನಿಲ್ದಾಣದಲ್ಲಿ ಜನವೋ ಜನ. ಸುಮಾರು ಒಂದು ಲಕ್ಷ ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಸೇರಿದ್ದರು.

ಜನಜಂಗುಳಿ ಕಂಡು ಕಂಗಾಲಾದ ರೈಲ್ವೆ ಅಧಿಕಾರಿಗಳು ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ರು. ಸ್ಥಳಕ್ಕೆ 2600 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ರು. ಸದ್ಯ ಚೀನಾದಲ್ಲಿ ಭಾರೀ ಚಳಿ ಬೀಳ್ತಾ ಇದೆ. ಭಾರೀ ಹಿಮಪಾತವಾಗುತ್ತಿರುವ ಕಾರಣ ಪೂರ್ವ ಹಾಗೂ ಮಧ್ಯ ಚೀನಾದಲ್ಲಿ 49 ರೈಲುಗಳು ತಡವಾಗಿ ಚಲಿಸ್ತಾ ಇವೆ. ಈ ಕಾರಣದಿಂದಾಗಿ ರೈಲ್ವೆ ನಿಲ್ದಾಣದಲ್ಲಿಯೇ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...