alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ವೀಕ್ಷಿಸಿ ಈತನಿಗೆ ನೀವೂ ಹೇಳ್ತಿರಿ ಹ್ಯಾಟ್ಸಾಪ್

ಜಗತ್ತಿನಲ್ಲಿ ಮಾನವೀಯತೆ, ಪ್ರಾಮಾಣಿಕತೆ ಇನ್ನೂ ಉಳಿದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಯಾರಿಗಾದರೂ ಹಣ, ಕ್ರೆಡಿಟ್ ಕಾರ್ಡ್ ಇದ್ದ ಪರ್ಸ್ ದಾರಿಯಲ್ಲಿ ಸಿಕ್ಕ ವೇಳೆ ಅದರಲ್ಲಿದ್ದ ಹಣ ತೆಗೆದುಕೊಳ್ಳುವುದರ ಜೊತೆಗೆ ಕ್ರೆಡಿಟ್ ಕಾರ್ಡ್ ಬಳಸಿ ಮನಸ್ಸಿಗೆ ಬಂದದ್ದನ್ನು ಖರೀದಿ ಮಾಡಿ ದುರುಪಯೋಗಪಡಿಸಿಕೊಳ್ಳುವವರೇ ಜಾಸ್ತಿ. ಆದರೆ ಈ ವಿಡಿಯೋದಲ್ಲಿ ಯುವಕನೊಬ್ಬ ತನಗೆ ಸಿಕ್ಕ ಪರ್ಸ್ ಅನ್ನು ಪ್ರಾಮಾಣಿಕವಾಗಿ ಅದರ ವಾರಸುದಾರರಿಗೆ ಮುಟ್ಟಿಸಿದ್ದಾನೆ.

ಜನರ ಪ್ರಾಮಾಣಿಕತೆ ಪರೀಕ್ಷಿಸಲೆಂದೇ ಈ ವಿಡಿಯೋ ಮಾಡಲಾಗಿದ್ದು, ವ್ಯಕ್ತಿಯೊಬ್ಬ ಬೇಕೆಂದೇ ಜನನಿಬಿಡ ಪ್ರದೇಶದಲ್ಲಿ ಹಣ ಹಾಗೂ ಕ್ರೆಡಿಟ್ ಕಾರ್ಡ್ ಇದ್ದ ತನ್ನ ಪರ್ಸ್ ಬೀಳಿಸುತ್ತಾನೆ. ಆದರೆ ಇದನ್ನು ನೋಡಿದವರೆಲ್ಲ ಕೂಡಲೇ ಆತನನ್ನು ಕೂಗಿ ಕರೆದು ಪರ್ಸ್ ಬೀಳಿಸಿಕೊಂಡಿರುವುದರ ಕುರಿತು ಗಮನ ಸೆಳೆದಿದ್ದಾರೆ.

ತನ್ನ ಹಲವು ಪ್ರಯತ್ನ ವಿಫಲವಾದ ಬಳಿಕ ವ್ಯಕ್ತಿ, ದಾರಿ ಮಧ್ಯೆ ಪರ್ಸ್ ಬೀಳಿಸಿ ಕಾಣೆಯಾಗುತ್ತಾನೆ. ಇದು ಯುವಕನೊಬ್ಬನ ಕೈಗೆ ಸಿಕ್ಕಿದ್ದು, ಆತ ಅದರೊಳಗಿದ್ದ ವ್ಯಕ್ತಿಯ ವಿಸಿಟಿಂಗ್ ಕಾರ್ಡ್ ನೋಡಿ ಫೋನ್ ಮಾಡಲು ಯತ್ನಿಸುತ್ತಾನೆ. ಆದರೆ ಸಂಪರ್ಕಿಸಲು ಯುವಕ ವಿಫಲನಾಗಿದ್ದು, ಪರ್ಸ್ ತೆಗೆದುಕೊಂಡು ಹೊರಡುತ್ತಾನೆ. ಬೇಕೆಂದೇ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿ, ತನ್ನ ಸ್ನೇಹಿತನ ಜೊತೆ ಕ್ಯಾಮರಾ ಸಮೇತ ಪರ್ಸ್ ತೆಗೆದುಕೊಂಡಿದ್ದ ಯುವಕನನ್ನು ಹಿಂಬಾಲಿಸುತ್ತಾನೆ.

ಈ ಮಧ್ಯೆ ಪರ್ಸ್ ನಲ್ಲಿದ್ದ ಫೋನ್ ನಂಬರ್ ನೋಡಿ ಪರ್ಸ್ ತೆಗೆದುಕೊಂಡಿದ್ದ ಯುವಕ ಹಲವು ಬಾರಿ ಕಾಲ್ ಮಾಡಲು ಯತ್ನಿಸುತ್ತಾನೆ. ಬಳಿಕ ಆತ ಮಾಲ್ ಒಂದಕ್ಕೆ ತೆರಳಿ ಹಲವು ವಸ್ತುಗಳನ್ನು ಖರೀದಿ ಮಾಡಿ ಅದನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುತ್ತಾನೆ. ಕ್ಯಾಮರಾದೊಂದಿಗೆ ಆತನನ್ನು ಹಿಂಬಾಲಿಸುತ್ತಿದ್ದ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿ ತನ್ನ ಪರ್ಸ್ ನಲ್ಲಿದ್ದ ಕ್ರೆಡಿಟ್ ಕಾರ್ಡ್ ಬಳಕೆಯಾಗುತ್ತಿದೆ ಎಂದೇ ಭಾವಿಸುತ್ತಾನೆ.

ಪರ್ಸ್ ತೆಗೆದುಕೊಂಡಿದ್ದ ಯುವಕ ಮಾಲ್ ನಲ್ಲಿ ತನ್ನ ಖರೀದಿ ಮುಗಿದ ಬಳಿಕ ವಾಪಾಸ್ ಹೊರಟಿದ್ದು, ಕ್ಯಾಮರಾದಲ್ಲಿ ಆತನ ಪ್ರತಿಯೊಂದು ನಡೆಯನ್ನು ರೆಕಾರ್ಡ್ ಮಾಡುತ್ತಿದ್ದವರು ಆತನನ್ನು ಹಿಂಬಾಲಿಸುತ್ತಾರೆ. ಅಚ್ಚರಿಯೆಂಬಂತೆ ಪರ್ಸ್ ತೆಗೆದುಕೊಂಡಿದ್ದ ಯುವಕ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿಯ ಮನೆಗೆ ಬರುತ್ತಾನೆ. ಹಿಂದೆಯೇ ಇದ್ದ ವ್ಯಕ್ತಿ ಯುವಕನನ್ನು ಮಾತನಾಡಿಸಿದಾಗ ಆತ ಪರ್ಸ್ ಮರಳಿಸಲು ಬಂದಿದ್ದಾಗಿ ಹೇಳಿದ್ದಾನೆ. ಮಾಲ್ ನಲ್ಲಿ ಖರೀದಿ ಮಾಡುವ ವೇಳೆ ಯುವಕ ಆತನದ್ದೇ ಕ್ರೆಡಿಟ್ ಕಾರ್ಡ್ ಬಳಸಿರುವುದು ಗೊತ್ತಾಗುತ್ತದೆ. ಬೇಕೆಂದೇ ಪರ್ಸ್ ಬೀಳಿಸಿಕೊಂಡು ಪ್ರಾಮಾಣಿಕತೆ ಪರೀಕ್ಷಿಸಲು ಮುಂದಾಗಿದ್ದ ವ್ಯಕ್ತಿ ಒಂದು ಕ್ಷಣ ಅವಕ್ಕಾಗುತ್ತಾನೆ. ತನ್ನ ಕ್ರೆಡಿಟ್ ಕಾರ್ಡ್ ಬಳಕೆಯಾಗಿರಬಹುದೆಂದು ಭಾವಿಸಿದ್ದವನಿಗೆ ನಾಚಿಕೆಯಾಗುತ್ತದೆ. ತನ್ನ ಪರ್ಸ್ ಮರಳಿಸಿದ ಯುವಕನಿಗೆ ವ್ಯಕ್ತಿ ಹಣ ನೀಡಲು ಮುಂದಾಗಿದ್ದು, ಅದನ್ನಾತ ನಿರಾಕರಿಸಿದ್ದಾನೆ. ಕಡೆಗೆ ತನ್ನ ಮನೆಗೆ ಬರಲು ಟ್ಯಾಕ್ಸಿಗೆ ನೀಡಿದ್ದ ಹಣವನ್ನಾದರೂ ತೆಗೆದುಕೋ ಎಂದು ವ್ಯಕ್ತಿ ಬಲವಂತವಾಗಿ ಆತನಿಗೆ ಹಣ ನೀಡಿದ್ದಾನೆ. ಈ ವಿಡಿಯೋ ಹಳೆಯದಾದರೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...