alex Certify
ಕನ್ನಡ ದುನಿಯಾ       Mobile App
       

Kannada Duniya

‘ಪ್ರೇಮಿಗಳ ದಿನ’ ದಂದು ಈಕೆ ನೀಡುತ್ತಿದ್ದಾಳೆ ಅಪರೂಪದ ಉಡುಗೊರೆ

3884donor-381097

ಫೆಬ್ರವರಿ 14 ಬಂತೆಂದರೆ ಏನೆಲ್ಲಾ ಸಂಭ್ರಮ ಸಡಗರ ಮನೆ ಮಾಡಿರುತ್ತದೆ ಎಂದರೆ, ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೇಮಿಗಳಿಗಾಗಿಯೇ ಪ್ರತ್ಯೇಕ ದಿನ ಇದಾಗಿರುವುದರಿಂದ ಅವರ ಸಂಭ್ರಮಕ್ಕೆ ಎಣೆಯೇ ಇರುವುದಿಲ್ಲ ಎನ್ನಬಹುದು.

ಪ್ರೇಮಿಗಳ ದಿನಾಚರಣೆಯಂದು ತನ್ನ ಪ್ರೇಮಿಗೆ ಹೇಗೆಲ್ಲಾ ಸಂತೋಷ, ಖುಷಿಪಡಿಸಬೇಕೆಂದು ಹಲವು ದಿನಗಳಿಂದಲೇ ಸ್ಕೆಚ್ ಹಾಕುತ್ತಿರುತ್ತಾರೆ. ಏನೆಲ್ಲಾ ಉಡುಗೊರೆ ಕೊಡಬಹುದೆಂದು ಚಿಂತಿಸುತ್ತಾರೆ. ಹೀಗೆ, ಹಲವರು ಹಲವು ರೀತಿಯ ಉಡುಗೊರೆ ಕೊಡುವುದನ್ನು ನೋಡಿದ್ದೀರಿ. ಇಲ್ಲೊಬ್ಬಳು ತನ್ನ ಪ್ರೇಮಿಗಾಗಿಯೇ ಕಿಡ್ನಿ ಕೊಡಲು ಮುಂದಾಗಿದ್ದಾಳೆ. ಹೌದು, ಬ್ರಿಟನ್ ಹ್ಯಾಂಪ್ ಶೈರ್ ಮೂಲದ 49 ವರ್ಷದ ಜಾಕ್ ಸಿಮಾರ್ಡ್ ಹಾಗೂ ಮಿಶೆಲ್ ಅವರ ನಡುವೆ ಕಳೆದ ಬೇಸಿಗೆಯಲ್ಲಿ ಪ್ರೀತಿ ಬೆಳೆದಿತ್ತು.

ಜಾಕ್ ಹಾಗೂ ಮಿಶೆಲ್ ಅನ್ಯೋನ್ಯವಾಗಿದ್ದು, ವಿಧಿಯಾಟವೇ ಬೇರೆಯಾಗಿತ್ತು. ಜಾಕ್ ಗೆ ಕಿಡ್ನಿ ಫೇಲ್ ಆಗಿದೆ ಎಂಬ ವಿಚಾರ ಗೊತ್ತಾದ ಮಿಶೆಲ್ ವೈದ್ಯರ ಬಳಿ ಕಿಡ್ನಿ ಕಸಿ ಮಾಡಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪರೀಕ್ಷೆಯ ನಂತರ ತಮ್ಮ ಕಿಡ್ನಿಯೇ ಹೊಂದಾಣಿಕೆಯಾಗುವ ಕಾರಣ ಮುಂದಿನ ಫೆಬ್ರವರಿ 14ರಂದು ಜಾಕ್ ಗೆ ಕಿಡ್ನಿ ದಾನ ಮಾಡಲಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...