alex Certify ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ತರಕಾರಿ ಕೂಟು ಮಾಡುವ ವಿಧಾನ

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಪದಾರ್ಥಗಳು:

¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 ಆಲೂಗಡ್ಡೆ, ¼ ಕೆ.ಜಿ. ಹುರಳಿಕಾಯಿ, 100 ಗ್ರಾಂ ಬಟಾಣಿ, ಸ್ವಲ್ಪ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, 4 ಸ್ಪೂನ್ ಗಸಗಸೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:

ಮೊದಲಿಗೆ ಆಲೂಗಡ್ಡೆಯನ್ನು ಅರ್ಧ ಬೇಯಿಸಿಕೊಂಡು, ಕ್ಯಾರೆಟ್, ಹುರಳಿಕಾಯಿ, ಸೀಮೆ ಬದನೆಕಾಯಿ, ಬಟಾಣಿ ಬೇಯಿಸಿಕೊಳ್ಳಿರಿ.

ಬಳಿಕ ಹಸಿ ಮೆಣಸಿನಕಾಯಿ, ಕಾಲುಭಾಗ ತೆಂಗಿನ ತುರಿ, ಗಸಗಸೆ, ಕೊತ್ತಂಬರಿ ಸೊಪ್ಪು, 5-6 ಮೆಣಸು ರುಬ್ಬಿಕೊಳ್ಳಿರಿ.

ಬೆಂದ ತರಕಾರಿಗೆ ಆಲೂಗಡ್ಡೆಯನ್ನು ಸೇರಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿರಿ.

ಆಮೇಲೆ ಹುಣಸೆಹಣ್ಣಿನ ರಸ, ಉಪ್ಪು ಹಾಕಿ ಕಲಕಿರಿ. ಎಲ್ಲಾ ಸೇರಿಸಿದ ಬಳಿಕ ಸಾಸಿವೆ, ಇಂಗು ಹಾಕಿ ಒಗ್ಗರಣೆ ಕೊಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...