alex Certify
ಕನ್ನಡ ದುನಿಯಾ       Mobile App
       

Kannada Duniya

ಸವಿರುಚಿಗೆ ತರಕಾರಿ ಕೂಟು

ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ತರಕಾರಿ ಬಳಸಿ ಕೂಟು ಮಾಡುವ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಪದಾರ್ಥಗಳು:

¼ ಕೆ.ಜಿ. ಕ್ಯಾರೆಟ್, 2 ಸೀಮೆ ಬದನೆಕಾಯಿ, 4 ಆಲೂಗಡ್ಡೆ, ¼ ಕೆ.ಜಿ. ಹುರಳಿಕಾಯಿ, 100 ಗ್ರಾಂ ಬಟಾಣಿ, ಸ್ವಲ್ಪ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣು, 4 ಸ್ಪೂನ್ ಗಸಗಸೆ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ:

ಮೊದಲಿಗೆ ಆಲೂಗಡ್ಡೆಯನ್ನು ಅರ್ಧ ಬೇಯಿಸಿಕೊಂಡು, ಕ್ಯಾರೆಟ್, ಹುರಳಿಕಾಯಿ, ಸೀಮೆ ಬದನೆಕಾಯಿ, ಬಟಾಣಿ ಬೇಯಿಸಿಕೊಳ್ಳಿರಿ.

ಬಳಿಕ ಹಸಿ ಮೆಣಸಿನಕಾಯಿ, ಕಾಲುಭಾಗ ತೆಂಗಿನ ತುರಿ, ಗಸಗಸೆ, ಕೊತ್ತಂಬರಿ ಸೊಪ್ಪು, 5-6 ಮೆಣಸು ರುಬ್ಬಿಕೊಳ್ಳಿರಿ.

ಬೆಂದ ತರಕಾರಿಗೆ ಆಲೂಗಡ್ಡೆಯನ್ನು ಸೇರಿಸಿದ ಬಳಿಕ ರುಬ್ಬಿದ ಮಿಶ್ರಣವನ್ನು ಸೇರಿಸಿರಿ.

ಆಮೇಲೆ ಹುಣಸೆಹಣ್ಣಿ ರಸ, ಉಪ್ಪು ಹಾಕಿ ಕಲಕಿರಿ. ಎಲ್ಲಾ ಸೇರಿಸಿದ ಬಳಿಕ ಸಾಸಿವೆ, ಇಂಗು ಹಾಕಿ ಒಗ್ಗರಣೆ ಕೊಡಿ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...