alex Certify
ಕನ್ನಡ ದುನಿಯಾ       Mobile App
       

Kannada Duniya

ಬಿರಿಯಾನಿ ಪ್ರಿಯರಿಗೆ ಬಾಯಿ ಚಪ್ಪರಿಸುವ ಸುದ್ದಿ

biriyani

ನೀವು ಬಿರಿಯಾನಿ ಪ್ರಿಯರೆ. ಹಾಗಿದ್ದಲ್ಲಿ ನಿಮಗೆ ಬಾಯಿ ಚಪ್ಪರಿಸುವ ಸುದ್ದಿಯೊಂದು ಇಲ್ಲಿದೆ. ರುಚಿ ರುಚಿಯಾದ ಬಿರಿಯಾನಿ ತಿನ್ನುವ ಸ್ಪರ್ಧೆಯೊಂದು ಏರ್ಪಟಾಗಿದ್ದು, ವಿಜೇತರಾದವರಿಗೆ ಬಹುಮಾನವೂ ಸಿಗಲಿದೆ.

ಚೆನ್ನೈನ Aasife Biriyani ಈ ಸ್ಪರ್ಧೆಯನ್ನು ಏರ್ಪಾಟು ಮಾಡಿದ್ದು, ಮಾರ್ಚ್ 29 ರಂದು ಅಲ್ಲಿನ ನಂ. 112, ಇಸಿಆರ್ ರಸ್ತೆ, ಪಲವಕ್ಕಮ್ ನಲ್ಲಿರುವ Aasife Biriyani ಯಲ್ಲಿ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕೆಂಬ ನಿಬಂಧನೆಯಿದ್ದು, ಮಾರ್ಚ್ 9 ರಿಂದ ಮಾರ್ಚ್ 24 ರವರೆಗೆ aasifebiriyani.com ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ನೋಂದಾಯಿಸಿದವರ ಪೈಕಿ 30 ಸ್ಪರ್ಧಿಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಳ್ಳಲಿದ್ದು, ಮೊದಲ ಬಹುಮಾನ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ. ಹಾಗೂ 3 ಸಾವಿರ ರೂ.ತೃತೀಯ ಬಹುಮಾನವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...