alex Certify ಸಿಹಿ ಸಿಹಿ ಕೊಕನಟ್ ಚಿಕ್ಕಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಹಿ ಸಿಹಿ ಕೊಕನಟ್ ಚಿಕ್ಕಿ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ ಸುಲಭ.

ತೆಂಗಿನಕಾಯಿ ಚಿಕ್ಕಿ ಮಾಡಲು ಬೇಕಾಗುವ ಪದಾರ್ಥ:

2 ಕಪ್ ಕೊಬ್ಬರಿ

¼ ಕಪ್ ಬೆಲ್ಲ

ಗಸಗಸೆ ¼ ಕಪ್

ಒಂದು ಕಪ್ ಸಕ್ಕರೆ

ಒಂದು ಚಮಚ ಏಲಕ್ಕಿ ಪುಡಿ

ತುಪ್ಪ ಸ್ವಲ್ಪ

ಅಲಂಕಾರಕ್ಕೆ ಒಣ ಹಣ್ಣುಗಳು

ತೆಂಗಿನಕಾಯಿ ಚಿಕ್ಕಿ ಮಾಡುವ ವಿಧಾನ:

ಒಂದು ಪಾತ್ರೆಗೆ ತೆಂಗಿನಕಾಯಿ ತುರಿಯನ್ನು ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿದುಕೊಳ್ಳಿ. ಇನ್ನೊಂದು ಪಾತ್ರೆಗೆ ತುಪ್ಪ ಹಾಕಿ ಅದಕ್ಕೆ ಹುರಿದ ತೆಂಗಿನಕಾಯಿ ತುರಿಯನ್ನು ಹಾಕಿ.

ನಂತ್ರ ಗಸಗಸೆ ಹಾಕಿ ಸ್ವಲ್ಪಹೊತ್ತು ಹುರಿಯಿರಿ. ಇದಕ್ಕೆ ಬೆಲ್ಲ, ಸಕ್ಕರೆ ಹಾಕಿ 3-4 ನಿಮಿಷ ಬೇಯಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಕೈ ಆಡಿಸಿ. ಇದನ್ನು ಚಿಕ್ಕಿ ಅಚ್ಚಿನಲ್ಲಿ ಹಾಕಿ ಫ್ರಿಜ್ ನಲ್ಲಿ ಇಡಿ.

ಸ್ವಲ್ಪ ಸಮಯದಲ್ಲಿಯೇ ಚಿಕ್ಕಿ ರೆಡಿ. ಅದರ ಮೇಲೆ ಒಣ ಹಣ್ಣನ್ನಿಟ್ಟು ಅಲಂಕರಿಸಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...