alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಲ್ಲಿ ನೀರು ತರಿಸುವ ಸುವರ್ಣ ಗಡ್ಡೆ ಕಬಾಬ್

suvr-gade

ಕಬಾಬ್ ಎಂದ ಕೂಡಲೇ ಬಹುತೇಕರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಸುವರ್ಣ ಗಡ್ಡೆಯಲ್ಲಿಯೂ ರುಚಿಯಾದ ಕಬಾಬ್ ಮಾಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಸುವರ್ಣ ಗಡ್ಡೆಯ ಕಬಾಬ್ ಕುರಿತ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಸುವರ್ಣ ಗಡ್ಡೆ- 1 ಕಪ್, ನಿಂಬೆರಸ- 2 ಚಮಚ, ಮೈದಾ- 3 ಚಮಚ, ಕಡಲೆ ಹಿಟ್ಟು- 3 ಚಮಚ, ಮೆಣಸಿನ ಪುಡಿ- 2 ಚಮಚ, ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಜೀರಿಗೆ ಪುಡಿ – ಅರ್ಧ ಚಮಚ, ಅರಿಶಿಣ ಪುಡಿ- ¼ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ:

ನೀರಿನ ಅಂಶವಿಲ್ಲದ ಸುವರ್ಣಗಡ್ಡೆಯನ್ನು ಸಿಪ್ಪೆ ತೆಗೆದು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ನಂತರ ಮೈದಾ ಹಿಟ್ಟು, ಕಡಲೆ ಹಿಟ್ಟು, ಮೆಣಸಿನ ಪುಡಿ, ನಿಂಬೆರಸ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಹಾಕಿ ಚೆನ್ನಾಗಿ ಕಲೆಸಿರಿ.

ಕತ್ತರಿಸಿಟ್ಟಿಕೊಂಡಿದ್ದ ಸುವರ್ಣಗಡ್ಡೆಯನ್ನು ಅದಕ್ಕೆ ಸೇರಿಸಿ 10 ನಿಮಿಷ ಇಟ್ಟು ನಂತರ ಎಣ್ಣೆಗೆ ಹಾಕಿ ಸುವರ್ಣ ಗಡ್ಡೆ ಬೇಯುವ ತನಕ ಪ್ರೈ ಮಾಡಿ. ನಿಮಗೆ ತಿನ್ನಲು ರುಚಿಯಾದ ಸುವರ್ಣ ಗಡ್ಡೆಯ ಕಬಾಬ್ ಸಿದ್ಧವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...