alex Certify ʼರಂಜಾನ್ʼ ವಿಶೇಷ ಸಿಹಿ ಭಕ್ಷ್ಯ ಶೀರ್ ಖುರ್ಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಂಜಾನ್ʼ ವಿಶೇಷ ಸಿಹಿ ಭಕ್ಷ್ಯ ಶೀರ್ ಖುರ್ಮಾ

ಶೀರ್ ಖುರ್ಮಾ ಭಾರತದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬದ ವಿಶೇಷ ಸಂದರ್ಭದಲ್ಲಿ ತಯಾರಿಸಲ್ಪಡುವಂತಹ ಒಂದು ವಿಶೇಷ ಸಿಹಿಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಉಪಹಾರವಾಗಿದ್ದು, ಶೇರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು, ಖುರ್ಮಾ ಅಂದರೆ ಖರ್ಜೂರ ಎಂದರ್ಥ.

ಶೀರ್ ಖುರ್ಮಾ ಮಾಡಲು ಬೇಕಾದ ಪದಾರ್ಥಗಳು:

8 ಕಪ್ ಅಥವಾ ಎರಡು ಲೀಟರ್ ಹಾಲು

100 ಗ್ರಾಂನಷ್ಟು ರೋಸ್ಟೆಡ್ ಶ್ಯಾವಿಗೆ

4 ಚಮಚ ಮಂದಗೊಳಿಸಿದ ಹಾಲು

ಹತ್ತರಿಂದ ಹನ್ನೆರಡು ಹಸಿರು ಏಲಕ್ಕಿ

8 ದೊಡ್ಡ ಚಮಚ ಸಕ್ಕರೆ

ಹತ್ತರಿಂದ ಹನ್ನೆರಡು ಉದ್ದವಾಗಿ ಕತ್ತರಿಸಿದಂತಹ ಖರ್ಜೂರ

ಅರ್ಧ ಕಪ್ ನಷ್ಟು ಪಿಸ್ತಾ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ

ಒಂದು ಚಿಟಿಕೆ ಉಪ್ಪು

ಮಾಡುವ ವಿಧಾನ :

ಮೊದಲು ಹಾಲನ್ನು ಕುದಿಸಿ, ಅದಕ್ಕೆ ಶ್ಯಾವಿಗೆ ಹಾಕಿ, 15 ರಿಂದ 20 ನಿಮಿಷಗಳ ನಂತರ ಅದಕ್ಕೆ ಸಕ್ಕರೆ, ಮಂದಗೊಳಿಸಿದ ಹಾಲು, ಚಿಟಿಕೆ ಉಪ್ಪು ಮತ್ತು ಖರ್ಜೂರವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಅರ್ಧಗಂಟೆ ಕಾಲ ಕುದಿಯುವುದಕ್ಕೆ ಬಿಡಬೇಕು.

ನಂತರ ಅದಕ್ಕೆ ಪಿಸ್ತಾ, ಬಾದಾಮಿ, ಗೋಡಂಬಿ, ಒಣದ್ರಾಕ್ಷಿಗಳ ಮಿಶ್ರಣವನ್ನು ಸೇರಿಸಿ ಕೆಲವು ನಿಮಿಷ ಬೇಯಿಸಬೇಕು. ಬಿಸಿ ಅಥವಾ ತಣ್ಣಗಾದ ಮೇಲೆ ಸೇವಿಸಬಹುದು‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...