alex Certify
ಕನ್ನಡ ದುನಿಯಾ       Mobile App
       

Kannada Duniya

ದಸರಾ ಸ್ಪೆಷಲ್: ಆಲೂಗಡ್ಡೆ ಪಲಾವ್

03_2007-kk820

ಆಲೂಗಡ್ಡೆ ಯಾರಿಗೆ ಇಷ್ಟವಿಲ್ಲ ಹೇಳಿ. ರುಚಿಕರ ಈ ಆಲೂಗಡ್ಡೆಯ ಪಲಾವ್ ಮಾಡೋದು ಬಹಳ ಸುಲಭ. ದಸರಾದಲ್ಲಿ ನೀವೂ ಆಲೂಗಡ್ಡೆ ಪಲಾವ್ ರುಚಿ ಸವಿಯಿರಿ.

ಆಲೂಗಡ್ಡೆ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು:

1 ದೊಡ್ಡ ಆಲೂಗಡ್ಡೆಯ ಸಣ್ಣ ಚೂರುಗಳು

1 ಕಪ್ ಅಕ್ಕಿ

1 ಚಮಚ ಜೀರಿಗೆ

2 ಚಮಚ ತುಪ್ಪ

2 ಲವಂಗ

ರುಚಿಗೆ ತಕ್ಕಷ್ಟು ಉಪ್ಪು

2 ಏಲಕ್ಕಿ

2 ದಾಲ್ಚಿನಿ ಎಲೆ

½ ಚಮಚ ಕೆಂಪು ಮೆಣಸಿನ ಪುಡಿ

3 ಕಪ್ ನೀರು

ಅಲಂಕರಿಸಲು ಕೊತ್ತಂಬರಿ ಸೊಪ್ಪು

ಆಲೂಗಡ್ಡೆ ಪಲಾವ್ ಮಾಡುವ ವಿಧಾನ :

ಒಂದು ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತ್ರ ತುಪ್ಪಕ್ಕೆ ಜೀರಿಗೆ, ಏಲಕ್ಕಿ, ದಾಲ್ಚಿನಿ, ಲವಂಗ ಹಾಕಿ. ಇದಕ್ಕೆ ಆಲೂಗಡ್ಡೆ ಹಾಗೂ ಅಕ್ಕಿಯನ್ನು ಹಾಕಿ ಫ್ರೈ ಮಾಡಿ. ಮೆಣಸಿನ ಪುಡಿ, ಉಪ್ಪು ಹಾಗೂ ನೀರನ್ನು ಹಾಕಿ 15 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ಪಲಾವ್ ಮೇಲೆ ಕೊತ್ತಂಬರಿ ಉದುರಿಸಿ ಬಡಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...