alex Certify
ಕನ್ನಡ ದುನಿಯಾ       Mobile App
       

Kannada Duniya

ಸೋರೆಕಾಯಿ ಹಲ್ವಾ

lauki-halwa-recipe

ಇದು ಹಬ್ಬಗಳ ಸೀಸನ್. ಹೊರಗಿನ ಸಿಹಿತಿಂಡಿಗಳಿಗಿಂತ ಮನೆಯಲ್ಲಿ ಸಿಹಿತಿಂಡಿ ತಯಾರಿಸಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗೆ ಹಬ್ಬದ ಖುಷಿಯನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಸೋರೆಕಾಯಿಯನ್ನು ಎಲ್ಲರೂ ಇಷ್ಟಪಡುವುದಿಲ್ಲ. ಆದ್ರೆ ಇದ್ರಲ್ಲಿ ಮಾಡಿದ ಸಿಹಿ ತಿಂಡಿ ಎಲ್ಲರಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಸೋರೆಕಾಯಿ ಹಲ್ವಕ್ಕೆ ಬೇಕಾಗುವ ಪದಾರ್ಥ:

ತುರಿದಿರುವ 2 ಕಪ್ ಸೋರೆಕಾಯಿ

ತುಪ್ಪ ಮೂರು ಚಮಚ

ಏಲಕ್ಕಿ 4

ಸಕ್ಕರೆ ರುಚಿಗೆ ತಕ್ಕಷ್ಟು

ಹಾಲು 2 ಕಪ್

ಗೋಡಂಬಿ, ಒಣ ದ್ರಾಕ್ಷಿ

ಸೋರೆಕಾಯಿ ಹಲ್ವಾ  :  ನಾನ್ ಸ್ಟಿಕ್ ಪಾತ್ರೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ತುರಿದ ಸೋರೆಕಾಯಿ ಹಾಕಿ ಒಂದೇಳು ನಿಮಿಷಗಳ ಕಾಲ ಬೇಯಿಸಿ. ನಂತ್ರ ಹಾಲು ಹಾಗೂ ಏಲಕ್ಕಿಯನ್ನು ಹಾಕಿ 10 ನಿಮಿಷಗಳವರೆಗೆ ಬೇಯಿಸಿ. ಸಕ್ಕರೆ ಹಾಕಿ ಒಂದೆರಡು ನಿಮಿಷ ಕೈ ಆಡಿಸಿ. ಸೋರೆಕಾಯಿ ಸಕ್ಕರೆ, ಹಾಲಿನ ಜೊತೆ ಸರಿಯಾಗಿ ಬೆಂದ ನಂತ್ರ ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿಯನ್ನು ಹಾಕಿ ಸರ್ವ್ ಮಾಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...