alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಗ್ಯದಾಯಕ ಕುಂಬಳಕಾಯಿ ದೋಸೆ

Kadubu 022ಬೇಕಾಗುವ ಪದಾರ್ಥಗಳು: ಅಕ್ಕಿ 2 ಕಪ್, ಕಾಯಿ ತುರಿ 1 ಕಪ್, ಉದ್ದಿನ ಬೇಳೆ ಕಾಲು ಕಪ್, ಕುಂಬಳಕಾಯಿ ತಿರುಳು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಕಾಲು ಕಪ್.

ತಯಾರಿಸುವ ವಿಧಾನ: ಅಕ್ಕಿ, ಉದ್ದಿನ ಬೇಳೆಯನ್ನು ತೊಳೆದು 4 ಗಂಟೆ ನೆನೆಸಿಡಿ, ತೊಳೆದ ನೀರು ಬಸಿದು ಕುಂಬಳಕಾಯಿ ತಿರುಳು, ತೆಂಗಿನಕಾಯಿ, ನೆನೆಸಿದ ಅಕ್ಕಿ, ಉದ್ದಿನ ಬೇಳೆಯೊಂದಿಗೆ ಹಾಕಿ ನುಣ್ಣಗೆ ರುಬ್ಬಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 1 ಗಂಟೆ ಮುಚ್ಚಿಡಿ. ಕಾವಲಿ ಕಾದ ನಂತರ ದೋಸೆ ಮಾಡಿ. ನಂತರ ತುಪ್ಪ ಸವರಿ ಎರಡೂ ಬದಿ ಬೇಯಿಸಿ, ಬಿಸಿಬಿಸಿ ಕುಂಬಳಕಾಯಿ ದೋಸೆ ಈಗ ಸಿಧ್ಧ. ಇದು ಈರುಳ್ಳಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...