alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯಲ್ಲಿ ನೀರು ತರಿಸುವ ಮೀನು ಆಲೂ ಕರಿ

pamlet-fish-curry-hggh

ಮೀನು ಎಂದ ಕೂಡಲೇ ಅನೇಕ ಬಗೆಯ ಖಾದ್ಯಗಳು ನೆನಪಿಗೆ ಬರುತ್ತವೆ. ಅವುಗಳಲ್ಲಿ ವಿಶೇಷವಾದ ಪೊಂಫ್ರೆಟ್ ಮೀನು ಆಲೂ ಕರಿ ಮಾಡುವ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

2 ಆಲೂಗಡ್ಡೆ, 1 ಮಧ್ಯಮ ಗಾತ್ರದ ಪೊಂಫ್ರೆಟ್ ಫಿಶ್, 1 ಈರುಳ್ಳಿ. 1 ಸ್ಪೂನ್ ಧನಿಯಾ ಪುಡಿ, 4 ಹಸಿ ಮೆಣಸಿನ ಕಾಯಿ, 2 ಟೀ ಸ್ಪೂನ್ ಹುಣಸೆಹಣ್ಣು, 1 ಸ್ಪೂನ್ ಮೆಣಸಿನಕಾಯಿ ಪುಡಿ, 1 ಸ್ಪೂನ್ ಜೀರಿಗೆ, ¼ ಕಪ್ ಕೊಬ್ಬರಿ ತುರಿ, 2 ಟೊಮ್ಯಾಟೊ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:

ಮೀನನ್ನು ಸ್ವಚ್ಛಗೊಳಿಸಿ ತುಂಡರಿಸಿಕೊಳ್ಳಿರಿ. ಆಲೂಗಡ್ಡೆಯನ್ನು ಕತ್ತರಿಸಿ, ಹಸಿಮೆಣಸಿನಕಾಯಿ ಸೀಳಿಕೊಂಡು, ಈರುಳ್ಳಿ, ಟೊಮ್ಯಾಟೊ ಹೆಚ್ಚಿಕೊಳ್ಳಿರಿ. ಕೊಬ್ಬರಿ ತುರಿಯನ್ನು ರುಬ್ಬಿಕೊಳ್ಳಿ.

4 ಸ್ಪೂನ್ ಎಣ್ಣೆ ಕಾಯಿಸಿ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಾಗುವವರೆಗೆ ಹುರಿದುಕೊಳ್ಳಿ. ಬಳಿಕ ಹಸಿಮೆಣಸಿನ ಕಾಯಿ ಹಾಕಿ ಹುರಿದು, ಜೀರಿಗೆ ಪುಡಿ, ಧನಿಯಾ ಪುಡಿ, ಮೆಣಸಿನ ಕಾಯಿ ಪುಡಿ ಹಾಕಿ ಕಲೆಸಿರಿ.

ಆಲೂಗಡ್ಡೆ ಹಾಕಿ ಕೆಲ ನಿಮಿಷದ ನಂತರ ಟೊಮ್ಯಾಟೊ ಸೇರಿಸಿ ಹುರಿದುಕೊಳ್ಳಿ. 2 ಕಪ್ ನೀರು ಹಾಕಿ ಆಲೂಗಡ್ಡೆ ಅರ್ಧದಷ್ಟು ಬೆಂದ ಬಳಿಕ ಅದಕ್ಕೆ ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿರಿ.

ಎಲ್ಲಾ ಬೆಂದ ಬಳಿಕ ಕೆಳಗೆ ಇಳಿಸಿ ಸಣ್ಣಗೆ ಹೆಚ್ಚಿದ ಕೊತಂಬರಿ ಸೊಪ್ಪು ಹಾಕಿ, ತಟ್ಟೆಗೆ ಬಡಿಸಿ ರುಚಿ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...