alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುದ್ದಿ ಓದಿದ್ರೆ ಬಾಯಲ್ಲಿ ನೀರೂರೋದು ಗ್ಯಾರಂಟಿ

ರಸ್ತೆ ಬದಿಯಲ್ಲಿ ಪಾನಿ ಪುರಿ ತಿಂದು ಹೊಟ್ಟೆ ಕೆಡಿಸಿಕೊಳ್ಳೋದು ಸರ್ವೇಸಾಮಾನ್ಯ. ಪಾನಿ ಪುರಿ ನೋಡಿದ್ರೆ ಬಾಯಲ್ಲಿ ನೀರೂರೋದು ಸಹಜ, ಆದ್ರೆ ಅದನ್ನು ತಿಂದ ನಂತರದ ಪರಿಣಾಮ ನೆನೆಸಿಕೊಂಡು ಎಷ್ಟೋ ಜನ ಬಾಯಿ ಚಪಲ ತಡೆದುಕೊಳ್ತಾರೆ.

ಯಾಕಂದ್ರೆ ರಸ್ತೆ ಬದಿಯಲ್ಲಿ ತಯಾರಿಸೋ ಪಾನಿ ಪುರಿಗೆ ಬಳಸುವ ನೀರು ಶುದ್ಧವಾಗಿರೋದಿಲ್ಲ, ಸೊಳ್ಳೆಗಳು, ನೊಣಗಳು ಮುತ್ತಿಕೊಂಡಿರುತ್ತವೆ. ಆದ್ರೆ ಇನ್ಮೇಲೆ ನೀವು ಮನೆಯಲ್ಲೇ ಎಷ್ಟು ಬೇಕೋ ಅಷ್ಟು ಪಾನಿಪುರಿ ಮಾಡಿಕೊಂಡು ತಿನ್ಬಹುದು. ಅದಕ್ಕಾಗಿ ನೀವು ಕಷ್ಟಪಡಬೇಕಾಗಿಯೂ ಇಲ್ಲ.

ಯಾಕಂದ್ರೆ ಪಾನಿಪುರಿ ತಯಾರಿಸುವ ಮಷಿನ್ ಬಂದಿದೆ. ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪಾನಿಪುರಿ ತಯಾರಿಸೋ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಸಾಹಸ್ ಗೆಂಬಲಿ, ಸುನಂದಾ ಸೋಮು, ನೇಹಾ ಶ್ರೀವಾಸ್ತವ ಹಾಗೂ ಕರಿಷ್ಮಾ ಅಗರ್ವಾಲ್ ಜೊತೆಯಾಗಿ ಈ ಪ್ರಾಜೆಕ್ಟ್ ಮಾಡಿದ್ದಾರೆ.

ಪಾನಿಪುರಿ ಭಾರತದ ಅತ್ಯಂತ ಜನಪ್ರಿಯ ಸ್ನಾಕ್ಸ್ ಗಳಲ್ಲೊಂದು. ಹಾಗಾಗಿ ಇದನ್ನು ಇನ್ನಷ್ಟು ಹೈಜೆನಿಕ್ ಮಾಡಬೇಕು ಅನ್ನೋ ಆಲೋಚನೆ ವಿದ್ಯಾರ್ಥಿಗಳಿಗೆ ಬಂದಿತ್ತು. ವಿದೇಶದಲ್ಲಿ ಓದ್ತಾ ಇರೋ ವಿದ್ಯಾರ್ಥಿಗಳು ಕೂಡ ಈ ಯಂತ್ರದ ಸಹಾಯದಿಂದ ಆಸೆಯಾದಾಗ್ಲೆಲ್ಲ ಪಾನಿಪುರಿ ತಿನ್ನಬಹುದು ಅನ್ನೋದು ಇವರ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...