alex Certify
ಕನ್ನಡ ದುನಿಯಾ       Mobile App
       

Kannada Duniya

ನವರಾತ್ರಿ ವಿಶೇಷ : ಹೆಸರು ಬೇಳೆಯ ಹಲ್ವಾ

ಬೇಕಾಗುವ ಸಾಮಾಗ್ರಿಗಳು :  ಹೆಸರು ಬೇಳೆ – 1/2 ಕಪ್‌, ಬೆಲ್ಲ – 1/2 ಕಪ್‌,  ಹಾಲು – 2 ಕಪ್‌, ತುಪ್ಪ 1/2 ಕಪ್‌,  ಗೋಡಂಬಿ, ಬದಾಮ್ – 1/2 ಟೇಬಲ್‌ ಸ್ಪೂನ್‌, ಏಲಕ್ಕಿ ಪುಡಿ – 1/2 ಟೀ ಸ್ಪೂನ್‌

ಮಾಡುವ ವಿಧಾನ : ಮೊದಲು ಹೆಸರು ಬೇಳೆಯನ್ನ ತೆಗೆದುಕೊಂಡು ಎರಡು ಬಾರಿ ಚೆನ್ನಾಗಿ ತೊಳೆದು ಅದನ್ನ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಅದರ ಹಸಿ ವಾಸನೆ ಹೋಗಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ ಉರಿಯನ್ನ ಆರಿಸಿ. ಹುರಿದ ಹೆಸರುಕಾಳನ್ನು ಮಿಕ್ಸರ್‌ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ.

ಇದರ ಜೊತೆಜೊತೆಗೇ ಮತ್ತೊಂದು ಪಾತ್ರೆಯಲ್ಲಿ ಅರ್ಧ ಕಪ್‌ ಬೆಲ್ಲವನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಸಿಂಪಡಿಸಿ ಸಣ್ಣ ಉರಿಯ ಮೇಲಿಟ್ಟು ಬೆಲ್ಲದ ಸಿರಪ್‌ ತಯಾರಿಸಿಟ್ಟುಕೊಳ್ಳಿ. ಈಗ ಸ್ವಲ್ಪ ದಪ್ಪ ತಳದ ಬಾಣಲೆಯನ್ನ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್‌ ಸ್ಪೂನ್‌ ತುಪ್ಪ ಹಾಕಿ ಗೋಡಂಬಿ ಮತ್ತು ಬದಾಮ್‌ ತುಣುಕುಗಳನ್ನ ಹುರಿದು ತೆಗೆದಿಟ್ಟುಕೊಳ್ಳಿ.

ನಂತರ ಬಾಣಲೆಯಲ್ಲಿ ಉಳಿದಿದ್ದ ತುಪ್ಪಕ್ಕೆ ಇನ್ನೊಂದು ಟೇಬಲ್‌ ಸ್ಪೂನ್ ತುಪ್ಪ ಸೇರಿಸಿ ಅದಕ್ಕೆ ಹೆಸರು ಬೇಳೆಯ ಹಿಟ್ಟನ್ನು ಹಾಕಿ ಹುರಿಯಿರಿ ತುಪ್ಪದೊಂದಿಗೆ ಸೇರಿ ಹೆಸರು ಬೇಳೆಯ ಪುಡಿ ಮಡ್ಡಿಯಾಗುತ್ತಿದ್ದಂತೆ ಅದಕ್ಕೆ ಬಿಸಿ ಹಾಲನ್ನು ಹಾಕಿ ಚನ್ನಾಗಿ ಕಲಕಿ. ಹಾಲಿನಲ್ಲಿ ಹೆಸರು ಬೇಳೆಯ ಹಿಟ್ಟು ಬೇಯುತ್ತಿದ್ದಂತೆ ಉಳಿದ ತುಪ್ಪ ಮತ್ತು ಬೆಲ್ಲದ ಸಿರಪ್‌ನ್ನೂ ಸೇರಿಸಿ ಸಣ್ಣ ಉರಿಯಲ್ಲಿ ಸರಿಯಾಗಿ ತಿರುವಿ. ಮಿಶ್ರಣ ಸರಿಯಾಗಿ ಬೆಂದಾಗ ಅದು ತುಪ್ಪವನ್ನ ಉಗುಳುತ್ತದೆ. ಆಗ ಹಲ್ವಾ ಸಿದ್ಧಗೊಂಡಿದೆ ಎಂದು ಅರ್ಥ. ಸಿದ್ಧಗೊಂಡ ಹಲ್ವಾಕ್ಕೆ ಏಲಕ್ಕಿ ಪುಡಿ ಮತ್ತು ಮೊದಲೇ ಹುರಿದು ಇಟ್ಟುಕೊಂಡಿದ್ದ ಗೋಡಂಬಿ, ಬದಾಮ್‌ ತುಣುಕುಗಳನ್ನ ಸೇರಿಸಿ ತಿರುವಿ ಸರ್ವ್ ಮಾಡಿದರೆ, ರುಚಿ ರುಚಿಯಾದ ಹೆಸರು ಬೇಳೆಯ ಹಲ್ವಾ ಸವಿಯಲು ಸಿದ್ಧ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...