alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿಗೆ ಊಟದ ಗಮ್ಮತ್ತೇ ಬೇರೆ…!

ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿ ಮಾಡುವುದು ಸಹಜ. ಅದರಲ್ಲಿಯೂ ಹೋಳಿಗೆ ಊಟವೆಂದರೆ ಅದರ ಗಮ್ಮತ್ತೇ ಬೇರೆ. ಅಂತಹ ಸವಿ ಹಾಗೂ ಆಕರ್ಷಿಸುವ ಗುಣ ಹೋಳಿಗೆಯಲ್ಲಿದೆ.

ಅದರಲ್ಲಿಯೂ ಬಹು ವಿಧದ ಹೋಳಿಗೆ ಇದ್ದು ಒಂದೊಂದೂ ಒಂದೊಂದು ತರಹದ ರುಚಿ ಹೊಂದಿರುತ್ತದೆ. ರುಚಿಯಾಗಿ ಹಾಗೂ ಸುಲಭವಾಗಿ ತಯಾರಿಸಬಹುದಾದ ಹೋಳಿಗೆ ಎಂದರೆ ಅದು ಕಡಲೆ ಬೇಳೆ ಹೋಳಿಗೆ.

ಬೇಕಾಗುವ ಸಾಮಗ್ರಿ :

ಕಡಲೆ ಬೇಳೆ 1 ಬಟ್ಟಲು

ಬೆಲ್ಲ 1 ಬಟ್ಟಲು

ಗೋಧಿಹಿಟ್ಟು 1 ಬಟ್ಟಲು

ಏಲಕ್ಕಿ ಪುಡಿ 1 ಚಮಚ

ಎಣ್ಣೆ

ಮಾಡುವ ವಿಧಾನ :

ಕಡಲೆ ಬೇಳೆಯನ್ನು ಹುರಿದುಕೊಂಡು ತಣ್ಣಗಾದ ನಂತರ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಪುಡಿ ಮಾಡಿ ಹುರಿದ ಕಡಲೆ ಬೇಳೆಯನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು.

ನಂತರ ಗೋಧಿಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ.

ಲಟ್ಟಿಸಿದ ಕಡಲೆ ಬೇಳೆ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿ ತೆಗೆಯಿರಿ. ಇದು ಎರಡು ಮೂರು ದಿನಗಳವರೆಗೆ ಕೆಡದಂತೆ ಇಡಬಹುದು. ತಿನ್ನಲು ಅತ್ಯಂತ ರುಚಿಯಾಗಿದ್ದು, ತುಪ್ಪ ಹಾಗೂ ಸಕ್ಕರೆ ಪಾಕದೊಂದಿಗೆ ಸವಿದರೆ ಮತ್ತಷ್ಟು ಸವಿ ಎನಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...