alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೀತಿ ಟೀ ಮಾಡಿದ್ರೆ ಎಲ್ಲರೂ ಹೇಳ್ತಾರೆ ವಾಹ್

chai-pakwangali_520_051917022202

ಅನೇಕರಿಗೆ ಟೀ ತುಂಬಾ ಇಷ್ಟ. ದಿನದ ಯಾವ ಸಮಯದಲ್ಲಿಯಾದ್ರೂ ಟೀ ಕುಡಿಯುತ್ತಾರೆ. ಟೀ ಸುವಾಸನೆ ಕೆಲವರನ್ನು ಆಕರ್ಷಿಸುತ್ತದೆ. ಆದ್ರೆ ಟೀ ಮಾಡುವಾಗ ಬಂದ ಸುವಾಸನೆ ಟೀ ಕುಡಿಯುವಾಗ ಇರೋದಿಲ್ಲ. ಅಂದ್ರೆ ಕಪ್ ನಲ್ಲಿ ಕಂಡ ಎಲ್ಲ ಟೀಗಳು ನೀವು ಊಹಿಸಿದಷ್ಟು ರುಚಿಯಾಗಿರೋದಿಲ್ಲ. ರುಚಿರುಚಿ ಟೀ ಮಾಡುವ ಫಾರ್ಮುಲಾವೊಂದನ್ನು ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಷನ್ ಕಂಡು ಹಿಡಿದಿದೆ.

ಈ ಫಾರ್ಮುಲಾ ಅನುಸರಿಸಿದ್ರೆ ರುಚಿ ರುಚಿ ಟೀ ಮಾಡಬಹುದೆಂದು ಬಿ ಎಸ್ ಐ ಹೇಳುತ್ತಿದೆ. ಹಾಗೆ ಕುಡಿದವರೆಲ್ಲ ವಾಹ್ ಎನ್ನದೆ ಇರೋದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್ಟಿಟ್ಯೂಷನ್ ಪ್ರಕಾರ ಹಾಲು ಕುದಿಸುವ ಪಾತ್ರೆ ಹಾಗೂ ಟೀ ಮಾಡುವ ಪಾತ್ರೆ ಬೇರೆ ಬೇರೆಯಾಗಿರಬೇಕು.

ಮೊದಲು ಒಂದು ಪಾತ್ರೆಯಲ್ಲಿ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಿ. ಹಾಲು ಕುದಿಯುತ್ತಿದ್ದಂತೆ ಚಮಚ ತೆಗೆದುಕೊಂಡು ಹಾಲನ್ನು ಕದಡುತ್ತಿರಿ. ಇನ್ನೊಂದು ಮಣ್ಣಿನ ಪಾತ್ರೆಯಲ್ಲಿ 100 ಮಿಲಿಗ್ರಾಂ ನೀರಿಗೆ 2 ಗ್ರಾಂ ಟೀ ಪುಡಿ ಹಾಕಿ ಅದನ್ನು 85 ಡಿಗ್ರಿ ಸೆಲ್ಸಿಯಸ್ ನಲ್ಲಿ ಕುದಿಸಿ. ಟೀ ಮಾಡುವಾಗ ಸಮಯಕ್ಕೆ ಹೆಚ್ಚು ಮಹತ್ವ ನೀಡಬೇಕು.

ಬಿ ಎಸ್ ಐ ಪ್ರಕಾರ 6 ನಿಮಿಷಕ್ಕಿಂತ ಹೆಚ್ಚು ಸಮಯ ಟೀಯನ್ನು ಕುದಿಸಬಾರದು. ಟೀಗೆ ಹಾಲು ಹಾಕಿ ಸರ್ವ್ ಮಾಡುವ ವೇಳೆ ಅದ್ರ ಬಿಸಿ 60 ಡಿಗ್ರಿಗಿಂತ ಕಡಿಮೆ ಇರಬಾರದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...