alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಸರು ಬೇಳೆ ಚಕ್ಕುಲಿ ಮಾಡುವ ವಿಧಾನ

chakli-3344ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು, ತೆಂಗಿನ ಹಾಲು-1/2 ಕಪ್.

ಮಾಡುವ ವಿಧಾನ : ಹೆಸರು ಬೇಳೆಯನ್ನು ಚೆನ್ನಾಗಿ ಬೇಯಿಸಿಕೊಂಡು 1 ಬೌಲ್ ಗೆ ಹಾಕಿ, ನಂತರ ಅದಕ್ಕೆ ಅಕ್ಕಿ ಹಿಟ್ಟು, ಇಂಗು, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ತೆಂಗಿನ ಹಾಲು ಹಾಕಿ ಮೃದುವಾಗಿ ಹಿಟ್ಟನ್ನು ಕಲಸಿಕೊಳ್ಳಿ. ಚೆನ್ನಾಗಿ ಮಿಶ್ರಣವಾದ ಹಿಟ್ಟನ್ನು ಚಕ್ಕುಲಿ ಒರಳಿನ ಮೂಲಕ ಕಾದ ಎಣ್ಣೆಯಲ್ಲಿ ಚಕ್ಕುಲಿ ಒತ್ತಿ ಕರಿಯಿರಿ ಈಗ ಗರಿ ಗರಿಯಾದ ಹೆಸರುಬೇಳೆ ಚಕ್ಕುಲಿ ಸವಿಯಲು ಸಿಧ್ಧ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...