alex Certify
ಕನ್ನಡ ದುನಿಯಾ       Mobile App
       

Kannada Duniya

ನವಣೆ ಪಾಯಸ ಮಾಡುವ ವಿಧಾನ

payasaಸಿರಿ ಧಾನ್ಯಗಳಿಂದ ತಯಾರಿಸುವ ಅಡುಗೆ ರುಚಿಯೂ ಹೌದು ಆರೋಗ್ಯದಾಯಕವೂ ಕೂಡಾ. ಸಿರಿ ಧಾನ್ಯ ನವಣೆಯಿಂದ ತಯಾರಿಸುವ ಪಾಯಸದ ರೆಸಿಪಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು : ನವಣೆ- 1 ಕಪ್, ತುಪ್ಪ- 4 ಚಮಚ, ಗೋಡಂಬಿ, ದ್ರಾಕ್ಷಿ, ಜಾಕಾಯಿ ಮತ್ತು ಲವಂಗದ ಪುಡಿ ಸ್ವಲ್ಪ, ಬೆಲ್ಲದ ಪುಡಿ- 1/2 ಕಪ್, ಹಾಲು- 5 ಕಪ್.

ಮಾಡುವ ವಿಧಾನ : ಶುಚಿಗೊಳಿಸಿದ ನವಣೆಯನ್ನು 2 ಚಮಚ ತುಪ್ಪ ಹಾಕಿ ಹುರಿಯಿರಿ. ಕುಕ್ಕರ್ ಗೆ ಹುರಿದ ನವಣೆ ಮತ್ತು ಕಾಯಿಸಿದ ಹಾಲು ಬೆರೆಸಿ 3 ವಿಷಲ್ ಕೂಗಿಸಿ. ಬೆಲ್ಲದ ಪುಡಿಗೆ ಸ್ವಲ್ಪ ನೀರು ಬೆರೆಸಿ ಪಾಕ ತಯಾರಿಸಿ. ಬೆಂದ ನವಣೆಗೆ ಬೆರೆಸಿ ಕುದಿಸಿ. ಲವಂಗದ ಪುಡಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ. ಈಗ ರುಚಿಯಾದ ನವಣೆ ಪಾಯಸ ರೆಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...