alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲೇ ತಯಾರಿಸಿ ಖರ್ಜೂರದ ಬಿಸ್ಕತ್

imagesಬೇಕಾಗುವ ಪದಾರ್ಥಗಳು : ಮೈದಾಹಿಟ್ಟು- 1 ಕಪ್, ಹಸಿ ಖರ್ಜೂರದ ತಿರುಳು- 1 ಕಪ್, ಹಾಲು- ಸ್ವಲ್ಪ, ಗೋಡಂಬಿ ತರಿ- 4 ಚಮಚ, ಸಕ್ಕರೆ ಪುಡಿ- 75ಗ್ರಾಂ, ಬೇಕಿಂಗ್ ಪೌಡರ್- 1 ಚಮಚ.

ತಯಾರಿಸುವ ವಿಧಾನ : ಮೈದಾಹಿಟ್ಟು, ಬೇಕಿಂಗ್ ಪೌಡರ್ ಸೇರಿಸಿ ಜರಡಿ ಹಿಡಿದು ಸಕ್ಕರೆ ಪುಡಿ, ಹಾಲು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಅರ್ಧ ಗಂಟೆ ಫ್ರಿಜ್ ನಲ್ಲಿಡಿ. ನಂತರ ಹಿಟ್ಟನ್ನು ಹೊರ ತೆಗೆದು ಅರ್ಧ ಸೆಂ.ಮೀ. ದಪ್ಪ ಇರುವಂತೆ 2 ಚಪಾತಿ ಲಟ್ಟಿಸಿಕೊಳ್ಳಿ. ಹಸಿ ಖರ್ಜೂರವನ್ನು ಸಣ್ಣ ಸಣ್ಣ ಚೂರು ಮಾಡಿಕೊಂಡು ಗೋಡಂಬಿ ತರಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಒಂದು ಲಟ್ಟಿಸಿದ ಚಪಾತಿಯ ಮೇಲೆ ಖರ್ಜೂರ, ಗೋಡಂಬಿ ಮಿಶ್ರಣವನ್ನು ಹರಡಿ.

ಇನ್ನೊಂದು ಚಪಾತಿ ಮೇಲಿಟ್ಟು ಹಗುರವಾಗಿ ಲಟ್ಟಿಸಿ. 1 ಬಾಕ್ಸ್ ಮುಚ್ಚಳದಲ್ಲಿ ಒಂದೇ ಅಳತೆಯಲ್ಲಿ ಬಿಲ್ಲೆಗಳನ್ನು ಕೊರೆದು ಬೇಕಿಂಗ್ ತಟ್ಟೆಗೆ ತುಪ್ಪ ಸವರಿ ಬಿಲ್ಲೆಗಳನ್ನು ಜೋಡಿಸಿ. ಓವನ್ ನಲ್ಲಿ 15 ನಿಮಿಷ ಬೇಯಿಸಿ. ಈಗ ರುಚಿಕರ ಖರ್ಜೂರದ ಬಿಸ್ಕತ್ ಸವಿಯಲು ರೆಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...