alex Certify ಮನೆಯಲ್ಲೇ ಮಾಡಿ ಕೊಡಿ ಮಕ್ಕಳಿಗೆ ಇಷ್ಟವಾಗುವ ಕ್ರೀಮ್ ಬಿಸ್ಕತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ಕೊಡಿ ಮಕ್ಕಳಿಗೆ ಇಷ್ಟವಾಗುವ ಕ್ರೀಮ್ ಬಿಸ್ಕತ್

ಬೇಕಾಗುವ ಪದಾರ್ಥಗಳು :

ಮೂರು ಚಟಾಕು ಮೈದಾ ಹಿಟ್ಟು, 4 ಚಟಾಕು ಸಕ್ಕರೆ, ನಾಲ್ಕು ಚಮಚ ಬೆಣ್ಣೆ, 2 ಕಪ್ ಕಸ್ಟರ್ಡ್ ಪೌಡರ್, ವೆನಿಲಾ ಎಸೆನ್ಸ್ ಹಾಗೂ 1 ಮೊಟ್ಟೆ.

ತಯಾರಿಸುವ ವಿಧಾನ :

ಕ್ರೀಮ್ ತಯಾರು ಮಾಡಿಕೊಳ್ಳಲು ಬೆಣ್ಣೆಯನ್ನು ಸ್ವಲ್ಪ ಬೀಸಿದ ಸಕ್ಕರೆಯೊಂದಿಗೆ ಚಿನ್ನಾಗಿ ಉಜ್ಜಿ. ಮಿಶ್ರಣಕ್ಕೆ ಸ್ವಲ್ಪ ಎಸೆನ್ಸ್ ಹಾಕಿ. ಕ್ರೀಮ್ ಸಿದ್ಧವಾಗುತ್ತದೆ.

ಈ ಮಿಶ್ರಣವನ್ನು ಮೈದಾ ಹಾಗೂ ಕಸ್ಟರ್ಡ್ ಪೌಡರಿನ ಮಿಶ್ರಣಕ್ಕೆ ಬೆರೆಸಿ. ಮೊಟ್ಟೆಯೊಳಗಿನ ತಿರುಳನ್ನು ಹಾಕಿ ಚೆನ್ನಾಗಿ ಬೆರೆಸಿದರೆ ಮುದ್ದೆಯಂತಾಗುತ್ತದೆ.

ಒಂದು ಮಣೆಯ ಮೇಲೆ ಈ ಮುದ್ದೆಯನ್ನು ಒತ್ತಿ ಒಂದು ನಿರ್ದಿಷ್ಟ ಉದ್ದ ಮತ್ತು ದಪ್ಪ ಗಾತ್ರಕ್ಕೆ ಕುಯ್ದು ಓವನ್ ನಲ್ಲಿ ಬೇಯಿಸಿ. ಆರಿದ ಮೇಲೆ ಎರಡು ಬಿಸ್ಕತ್ ಗಳ ಮಧ್ಯೆ ಕ್ರೀಮ್ ಸವರಿ ಮುಚ್ಚಿ. ಕ್ರೀಮ್ ಬಿಸ್ಕತ್ ತಯಾರಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...