alex Certify
ಕನ್ನಡ ದುನಿಯಾ       Mobile App
       

Kannada Duniya

ಯುಗಾದಿ ಸ್ಪೆಷಲ್ : ಬೇಳೆ ಹೋಳಿಗೆ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಸಾಮಾನ್ಯ. ಯುಗಾದಿಯಂದು ಮನೆ ಮಂದಿಯೆಲ್ಲಾ ಸಂಭ್ರಮದಲ್ಲಿರುವಾಗ, ಬೇಳೆ ಹೋಳಿಗೆ ಮಾಡಿ, ಹಬ್ಬದ ಸಂಭ್ರಮವನ್ನು ಹೆಚ್ಚಿಸಿ. ರುಚಿಯಾದ ಬೇಳೆ ಹೋಳಿಗೆ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಕಡಲೆಬೇಳೆ ಅಥವಾ ತೊಗರಿಬೇಳೆ -ಅರ್ಧ ಕೆ.ಜಿ., ಬೆಲ್ಲ -400 ಗ್ರಾಂ, ತೆಂಗಿನ ಕಾಯಿ 1, ಏಲಕ್ಕಿ -10, ಕಡಲೆಕಾಯಿ ಎಣ್ಣೆ –ಹೋಳಿಗೆಗೆ ತಕ್ಕಷ್ಟು, ಮೈದಾಹಿಟ್ಟು –ಅರ್ಧ ಕೆ.ಜಿ., ಗಸಗಸೆ –ಸ್ವಲ್ಪ.

ತಯಾರಿಸುವ ವಿಧಾನ:

ಮೊದಲಿಗೆ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಬೇಯಿಸಿಕೊಳ್ಳಿ. ಬೇಯಿಸಿದ ಬಳಿಕ ತೆಂಗಿನಕಾಯಿ, ಬೆಲ್ಲದ ಜೊತೆಗೆ(ನೀರು ಹಾಕದೇ) ರುಬ್ಬಿಕೊಳ್ಳಿ. ರುಬ್ಬಿದ ಬಳಿಕ ಏಲಕ್ಕಿ ಪುಡಿ, ಬಾಣಲೆಯಲ್ಲಿ ಹುರಿದ ಗಸಗಸೆ ಮಿಶ್ರಣ ಮಾಡಿ.

ಶುದ್ಧ ಮಾಡಿಕೊಂಡ ಮೈದಾ ಹಿಟ್ಟನ್ನು ಚಪಾತಿ ಹಿಟ್ಟಿನ ರೀತಿ ಕಲೆಸಿಕೊಂಡು ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಚಪಾತಿಯಂತೆ ಸಣ್ಣಗೆ ಲಟ್ಟಿಸಿಕೊಂಡು ಅದರಲ್ಲಿ ಹೂರಣವನ್ನು ತುಂಬಿ ಮುಚ್ಚಿ, ಉಂಡೆಗಳನ್ನು ಮಾಡಿಕೊಳ್ಳಿ.

ಆ ಉಂಡೆಗಳನ್ನು ಅಗಲವಾಗಿ ಲಟ್ಟಿಸಿ ಅದನ್ನು ಎಣ್ಣೆ ಹಚ್ಚಿ ಹೆಂಚಿನಲ್ಲಿ ಬೇಯಿಸಿ. ಅದಕ್ಕೆ ತುಪ್ಪ, ಹಾಲು ಬೆರೆಸಿ ರುಚಿ ನೋಡಿ. ಇದೇ ರೀತಿಯಲ್ಲಿ ಕೊಬ್ಬರಿ ಹೋಳಿಗೆ ಮಾಡಬಹುದು. ಬೇಳೆಗೆ ಬದಲಾಗಿ ಕೊಬ್ಬರಿ ಬಳಸಬಹುದು. ಬೆಲ್ಲಕ್ಕೆ ಬದಲಾಗಿ ಸಕ್ಕರೆ ಕೂಡ ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...