alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಡೆಗೆ ಇರಲಿ ಗೋವಾ ಫಿಶ್ ಕರಿ

fis-goa

ಭಾನುವಾರ ಹೆಚ್ಚಿನವರ ಮನೆಯಲ್ಲಿ ನಾನ್ ವೆಜ್ ಅಡುಗೆ ತಯಾರಾಗುತ್ತೆ. ಮೀನಿನ ಖಾದ್ಯಗಳು ಅನೇಕರಿಗೆ ಅಚ್ಚುಮೆಚ್ಚು. ಸುಲಭವಾಗಿ ಮಾಡಬಹುದಾದ ಗೋವಾ ಫಿಶ್ ಕರಿಯ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥ:

1 ಮಧ್ಯಮ ಗಾತ್ರದ ಪಾಂಫ್ರೆಟ್, 1 ದೊಡ್ಡ ಈರುಳ್ಳಿ ಹೆಚ್ಚಿದ್ದು, 1 ತೆಂಗಿನ ಕಾಯಿ ಗಟ್ಟಿ ಹಾಲು, ಅರ್ಧ ಕಪ್ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು.

ರುಬ್ಬಿಕೊಳ್ಳಲು ಬೇಕಾದ ಸಾಮಗ್ರಿ:

¼ ತೆಂಗಿನ ಕಾಯಿ, ½ ಕರಿಮೆಣಸು, 1 ಟೀ ಸ್ಪೂನ್ ಧನಿಯಾ, 1 ಟೀ ಸ್ಪೂನ್ ಜೀರಿಗೆ, ಬೀಜ ತೆಗೆದ 10 ಕೆಂಪು ಮೆಣಸಿನ ಕಾಯಿ, 2 ಬೆಳ್ಳುಳ್ಳಿ.

ತಯಾರಿಸುವ ವಿಧಾನ:

ಪಾತ್ರೆಯೊಂದರಲ್ಲಿ ರುಬ್ಬಿದ ಮಸಾಲೆ, ಈರುಳ್ಳಿ, ಉಪ್ಪು ಹಾಕಿರಿ. 2 ಕಪ್ ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಈರುಳ್ಳಿ ಬೇಯುವ ತನಕ ಬೇಯಿಸಿ.

ಅದಕ್ಕೆ ತೆಂಗಿನ ಹಾಲು ಹಾಕಿ ಉರಿ ಜಾಸ್ತಿ ಮಾಡಿ ಕುದಿಸಿರಿ. ಬಳಿಕ ಉರಿ ಕಡಿಮೆ ಮಾಡಿಕೊಳ್ಳಿ. ಹುಣಸೆ ಹಣ್ಣಿನ ರಸವನ್ನು ಹಾಕಿ ಮತ್ತೆ 5 ನಿಮಿಷ ಬೇಯಿಸಿ.

ಕೊನೆಗೆ ಕ್ಲೀನ್ ಮಾಡಿಟ್ಟುಕೊಂಡ ಮೀನು ಹಾಕಿ ಬೇಯಿಸಿ, ಬೆಂದ ಬಳಿಕ ಕೆಳಗಿಳಿಸಿ ರುಚಿಯನ್ನು ಸವಿಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...